ADVERTISEMENT

ರಾಮ ಮಂದಿರವಾಯಿತು, ಇನ್ನು ಸೀತಾ ಮಾತೆ ಮಂದಿರ ನಿರ್ಮಾಣ ಮಾಡುತ್ತೇವೆ: ಅಮಿತ್​​ ಶಾ

ಪಿಟಿಐ
Published 16 ಮೇ 2024, 11:01 IST
Last Updated 16 ಮೇ 2024, 11:01 IST
<div class="paragraphs"><p>ಅಮಿತ್​​ ಶಾ</p></div>

ಅಮಿತ್​​ ಶಾ

   

(ಪಿಟಿಐ ಚಿತ್ರ)

ಸೀತಾಮಡಿ (ಬಿಹಾರ): ರಾಮ ಮಂದಿರವಾಯಿತು. ಇನ್ನು ಸೀತಾ ಮಂದಿರವನ್ನು ನಿರ್ಮಾಣ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್​​ ಶಾ ಹೇಳಿದ್ದಾರೆ.

ADVERTISEMENT

ಬಿಹಾರದ ಸೀತಾಮಡಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 'ನಾವು ವೋಟ್ ಬ್ಯಾಂಕ್’ಗೆ ಹೆದರುವುದಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಿದ್ದೇವೆ. ಈಗ ಸೀತಾಮಡಿಯಲ್ಲಿ ಸೀತಾ ಮಾತೆಯ ಬೃಹತ್ ಮಂದಿರವನ್ನು ನಿರ್ಮಿಸುತ್ತೇವೆ' ಎಂದಿದ್ದಾರೆ.

ಸೀತಾ ಮಾತೆಯ ಜನ್ಮಸ್ಥಳವೆಂದು ಪರಿಗಣಿಸಲಾದ ಸೀತಾಮಡಿ ಜಿಲ್ಲೆಯ 'ಪುನೌರ ಧಾಮ'ವನ್ನು ಅಂತರರಾಷ್ಟ್ರೀಯ ಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಎನ್‌ಡಿಎ ಸರ್ಕಾರ ನಿರ್ಧರಿಸಿದೆ. ಇದರ ಅಭಿವೃದ್ಧಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಂಪುಟ ₹ 72.47 ಕೋಟಿ ಮೀಸಲಿಟ್ಟಿದೆ ಎಂದು ಅಮಿತ್‌ ಶಾ ತಿಳಿಸಿದ್ದಾರೆ.

ಸೀತಾಮಡಿ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿ (ಯು) ಹಿರಿಯ ನಾಯಕ ಮತ್ತು ಬಿಹಾರ ವಿಧಾನ ಪರಿಷತ್‌ ಅಧ್ಯಕ್ಷ ದೇವೇಶ್ ಚಂದ್ರ ಠಾಕೂರ್ ಕಣದಲ್ಲಿದ್ದಾರೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.