ಶಹಜಹಾನ್‌ಪುರ(ಉತ್ತರಪ್ರದೇಶ): ಇಲ್ಲಿನ ಚಿಲೌವಾ ಹಳ್ಳಿಯ ಮುಸ್ಲಿಂ ಮಹಿಳೆ ರುಕ್ಷಾರ್ ಎನ್ನುವವರುಕೋಮು ಸೌಹಾರ್ದತೆ ಸಾರುವ ಸಲುವಾಗಿ ತಮ್ಮ ಮಗಳ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ರಾಮ–ಸೀತೆಯ ಚಿತ್ರವನ್ನು ಮುದ್ರಿಸಿದ್ದಾರೆ.
‘ಈ ಊರಿನಲ್ಲಿ ನಾವು(ಹಿಂದೂ–ಮುಸ್ಲೀಮರು) ಒಟ್ಟಿಗೆ ಬದುಕುತ್ತಿದ್ದೇವೆ. ಜನರ ನಡುವೆ ನಾವು ಕೋಮು ಸೌಹಾರ್ದವನ್ನು ಸಾರಲು ಬಯಸಿದ್ದೆವು. ಧರ್ಮ ಆಧಾರದಲ್ಲಿ ನಮ್ಮನ್ನು ನಾವು ವಿಭಾಗಿಸಿಕೊಳ್ಳಬಾರದು’ ಎಂದು ರುಕ್ಷಾರ್ ಹೇಳಿದ್ದಾರೆ.
ಮದುಮಗಳ ಸೋದರ ಉಮರ್ ಅಲಿ, ಹಳ್ಳಿಗರು ನಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ. ಜನರ ಪ್ರತಿಕ್ರಿಯೆಯನ್ನು ಕಂಡು ನಾವೂ ಸಂತಸಗೊಂಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.