ADVERTISEMENT

ಮುಖ ಸಂಪೂರ್ಣವಾಗಿ ಕಂಡ ಬಾಲರಾಮನ ವಿಗ್ರಹದ ಚಿತ್ರ ನೈಜ ಅಲ್ಲ! ರಾಮ ಮಂದಿರದ ಅರ್ಚಕ

ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 15:37 IST
Last Updated 20 ಜನವರಿ 2024, 15:37 IST
<div class="paragraphs"><p>ರಾಮ ಮಂದಿರ</p></div>

ರಾಮ ಮಂದಿರ

   

– ಸಾಂದರ್ಭಿಕ ಚಿತ್ರ (ಪಿಟಿಐ)

ಲಖನೌ: ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೊಳ್ಳಲಿರುವ ಬಾಲರಾಮನ ವಿಗ್ರಹದ ಚಿತ್ರ ಬಹಿರಂಗಗೊಂಡು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ಹೇಳಿದ್ದಾರೆ.

ADVERTISEMENT

ಗುರುವಾರ ಬಹಿರಂಗಗೊಂಡಿದ್ದ ಚಿತ್ರದಲ್ಲಿ ವಿಗ್ರಹದ ಕಣ್ಣುಗಳಿಗೆ ಹಳದಿ ಬಟ್ಟೆ ಕಟ್ಟಲಾಗಿತ್ತು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಶುಕ್ರವಾರ ಹರಿದಾಡಿದ್ದ ಚಿತ್ರದಲ್ಲಿ ವಿಗ್ರಹ ಸಂಪೂರ್ಣ ಕಾಣುತ್ತಿತ್ತು. ಕಣ್ಣುಗಳಿಗೆ ಬಟ್ಟೆ ಕಟ್ಟಿರರಲಿಲ್ಲ. ‘ಕಣ್ಣು ಒಳಗೊಂಡಂತೆ ಮುಖ ಸಂಪೂರ್ಣವಾಗಿ ಕಾಣುವ ಚಿತ್ರ ವಿಗ್ರಹದ ನೈಜ ಚಿತ್ರ ಅಲ್ಲ’ ಎಂದು ದಾಸ್ ಸ್ಪಷ್ಟಪಡಿಸಿದ್ದಾರೆ.

‘ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ವಿಗ್ರಹದ ಕಣ್ಣುಗಳನ್ನು ಯಾರಿಗೂ ತೋರಿಸುವಂತಿಲ್ಲ’ ಎಂದು ಅವರು ಶನಿವಾರ ತಿಳಿಸಿದರು. ‘ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು ಹೇಗೆ? ಅದನ್ನು ಯಾರು ಸೋರಿಕೆ ಮಾಡಿದ್ದು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.