ಅಮೇಠಿ, ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದ್ದರೂ ದೇಶದಲ್ಲಿ ಎಲ್ಲಿಯೂ ‘ರಾಮರಾಜ್ಯ’ ಕಾಣಿಸುತ್ತಿಲ್ಲ ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಹೇಳಿದರು.
ಇಲ್ಲಿನ ಪುರೆ ರಾಮ್ದಿನ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ದೇಶದ ಸಾವಿರಾರು ಮಂದಿ ಹಿಂದೂಗಳಿಗೆ ಮನೆ, ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಯುವಕರಿಗೆ ನೌಕರಿ ಮತ್ತು ರೈತರು ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಲೆ ಲಭಿಸಬೇಕೆಂದು ಬಯಸುತ್ತೇನೆ’ ಎಂದು ಹೇಳಿದರು.
‘ಹಿಂದೂಗಳು ಜಾಗೃತರಾಗಿ ರಾಮ ಮಂದಿರ ನಿರ್ಮಾಣಕ್ಕಾಗಿ ಅಭಿಯಾನ ನಡೆಸಿದ್ದಾರೆ ಮತ್ತು ಮಂದಿರ ನಿರ್ಮಾಣಕ್ಕಾಗಿ ಗ್ರಾಮಗಳಿಗೆ ತೆರಳಿ ದೇಣಿಗೆ ಸಂಗ್ರಹಿಸಿದ್ದಾರೆ’ ಎಂದೂ ತೊಗಾಡಿಯ ಹೇಳಿದರು.
‘ದೇಶದಲ್ಲಿ ಹಿಂದೂಗಳು ಶ್ರೀಮಂತರಾಗಬೇಕು ಮತ್ತು ಸುರಕ್ಷಿತರಾಗಿರಬೇಕು ಎಂಬುದು ನನ್ನ ಅಭಿಯಾನ’ ಎಂದು ಅವರು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.