ADVERTISEMENT

ಸಂಕ್ರಾಂತಿ ಬಳಿಕ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ

ಪಿಟಿಐ
Published 20 ಆಗಸ್ಟ್ 2023, 20:47 IST
Last Updated 20 ಆಗಸ್ಟ್ 2023, 20:47 IST
ಅಯೋಧ್ಯೆಯ ಕರಸೇವಕಪುರಂನಲ್ಲಿ ಕೆತ್ತನೆ ಪೂರ್ಣಗೊಂಡಿರುವ ಕಲ್ಲಿನ ಕಂಬಗಳು
ಅಯೋಧ್ಯೆಯ ಕರಸೇವಕಪುರಂನಲ್ಲಿ ಕೆತ್ತನೆ ಪೂರ್ಣಗೊಂಡಿರುವ ಕಲ್ಲಿನ ಕಂಬಗಳು   

ಹರಿದ್ವಾರ: ಅಯೋಧ್ಯೆಯ ರಾಮಮಂದಿರದ ಗರ್ಭಗುಡಿ ಸಿದ್ಧವಾಗಿದ್ದು, ಮಕರ ಸಂಕ್ರಾಂತಿ ಬಳಿಕ ಜನವರಿ 16 ಮತ್ತು 24ರ ನಡುವೆ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪಿಸಲಾಗುವುದು ಎಂದು ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.

ಭಾನುವಾರ ಇಲ್ಲಿಗೆ ಭೇಟಿ ನೀಡಿ, ಸಂತರು ಮತ್ತು ಸ್ವಾಮೀಜಿಗಳನ್ನು ಭೇಟಿಯಾಗಿ ದೇವಾಲಯದ ನಿರ್ಮಾಣದ ಪ್ರಗತಿ ಬಗ್ಗೆ ಮಾಹಿತಿ ನೀಡಿದರು. ಅಯೋಧ್ಯೆಯಲ್ಲಿ 10 ದಿನಗಳ ಪ್ರಾಣ ಪ್ರತಿಷ್ಠಾ (ಪ್ರತಿಷ್ಠಾಪನೆ) ಸಮಾರಂಭದಲ್ಲಿ ಭಾಗವಹಿಸುವಂತೆ ಅವರನ್ನು ಆಹ್ವಾನಿಸಿದರು.

ದೇವಾಲಯದ ಮೊದಲ ಮಹಡಿ ನಿರ್ಮಾಣದ ನಂತರ ರಾಮಲಲ್ಲಾ ಪ್ರತಿಷ್ಠಾಪನೆ ನಡೆಯಲಿದೆ.  ರಾಮಮಂದಿರದ ಮೊದಲ ಮಹಡಿಯ ಶೇಕಡ 80 ರಷ್ಟು ಕೆಲಸ ಪೂರ್ಣಗೊಂಡಿದೆ. ಭಕ್ತರ ದರ್ಶನದ ನಡುವೆ ನಿರ್ಮಾಣ ಚಟುವಟಿಕೆಗಳು ಮುಂದುವರಿಯುತ್ತವೆ. ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ರೈ ಹೇಳಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.