ನವದೆಹಲಿ: ಬಾಲಿವುಡ್ ನಟ ಅಮೀರ್ ಖಾನ್ ಅವರ 'ಸತ್ಯಮೇವ ಜಯತೆ' ಹಳೆಯ ವಿಡಿಯೋವನ್ನು ಹಂಚಿರುವ ಯೋಗಗುರು ಬಾಬಾ ರಾಮದೇವ್, ವೈದ್ಯಕೀಯ ಮಾಫಿಯಾಗಳಿಗೆ ಜನಪ್ರಿಯ ನಟನ ವಿರುದ್ಧ ಪ್ರತಿಭಟಿಸುವ ಧೈರ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ನಿರೂಪಕ ಅಮೀರ್ ಖಾನ್ ಅವರಿಗೆ ಐಎಎಸ್ ಅಧಿಕಾರಿ ಸಮಿತ್ ಶರ್ಮಾ, ಜೆನೆರಿಕ್ ಔಷಧಿ ಹಾಗೂ ಬ್ರ್ಯಾಂಡೆಡ್ ಔಷಧೀಯ ನಡುವಣ ವ್ಯತ್ಯಾಸವನ್ನು ವಿವರಿಸುತ್ತಾರೆ. ಕೆಲವು ಔಷಧಿಗಳನ್ನು ಮಾರುಕಟ್ಟೆಯಲ್ಲಿ ನೈಜ ಮೌಲ್ಯಕ್ಕಿಂತ 50 ಪಟ್ಟು ಹೆಚ್ಚು ಮೊತ್ತಕ್ಕೆ ಮಾರಾಟ ಮಾಡಲಾಗುತ್ತದೆ ಎಂದು ಹೇಳುತ್ತಾರೆ.
ಈ ವಿಡಿಯೋವನ್ನೀಗ ರಾಮದೇವ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಮೀರ್ ವಿರುದ್ಧಮಾತನಾಡುವಧೈರ್ಯವಿದೆಯೇ ಎಂದು ಸವಾಲು ಹಾಕಿದ್ದಾರೆ.
ಆಧುನಿಕ ಔಷಧಿ ಮತ್ತು ವೈದ್ಯರ ವಿರುದ್ಧ ಅವಹೇಳನ ಮಾಡಿದ್ದಕ್ಕಾಗಿ ಐಎಂಎ ಕೆಲವು ದಿನಗಳ ಹಿಂದೆ ರಾಮದೇವ್ ವಿರುದ್ಧ ₹1000 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದೆ. 15 ದಿನಗಳಲ್ಲಿ ರಾಮದೇವ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಲಾಗಿದ್ದು, ಇಲ್ಲವಾದ್ದಲ್ಲಿ ಯೋಗಗುರು ಬಂಧನಕ್ಕೆ ಪಟ್ಟು ಹಿಡಿದಿದೆ.
ಇದನ್ನೂ ಓದಿ:ಅಲೋಪಥಿ ಜತೆ ಯೋಗಗುರು ಗುದ್ದಾಟ
ಅಲೋಪಥಿಗೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಚಿಕಿತ್ಸೆ ನೀಡುವ ಸಾಮರ್ಥ್ಯವಿದೆಯೇ ಎಂಬುದನ್ನು ಪ್ರಶ್ನಿಸಿದ್ದ ರಾಮದೇವ್, ಈ ಚಿಕಿತ್ಸಾ ವಿಧಾನದಿಂದ ಲಕ್ಷಾಂತರ ಮಂದಿ ಸಾಯುವಂತಾಗಿದೆ ಎಂದು ಆರೋಪಿಸಿದ್ದರು.
ಇದಾದ ಬೆನ್ನಲ್ಲೇ ರಾಮದೇವ್ ಹಾಗೂ ಭಾರತೀಯ ವೈದ್ಯಕೀಯ ಮಂಡಳಿ ನಡುವಿನ ಗುದ್ದಾಟ ಜೋರಾಗಿದೆ. ಅಲ್ಲದೆ ರಾಮದೇವ್ ಹೇಳಿಕೆಗೆ ವೈದ್ಯಕೀಯ ಲೋಕದಲ್ಲಿ ಭಾರಿ ಆಕ್ರೋಶ ಹುಟ್ಟು ಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.