ನವದೆಹಲಿ: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ಉಚಿತ ಸೈಕಲ್ ವಿತರಣೆ ಯೋಜನೆಯ (ಬಿಡಿಎಸ್) ಕಾರಣದಿಂದಾಗಿ ಭಾರತದಲ್ಲಿ ‘ಮೌನ ಕ್ರಾಂತಿ’ಯೊಂದು ನಡೆದಿದೆ. ಗ್ರಾಮೀಣ ಭಾಗದ ಬಾಲಕಿಯರು ಈ ಕ್ರಾಂತಿಯ ನೇತೃತ್ವ ವಹಿಸಿಕೊಂಡಿದ್ದಾರೆ.
ಶಾಲೆಗಳಿಗೆ ಹೋಗಲು ಸೈಕಲ್ ಬಳಸುವ ವಿದ್ಯಾರ್ಥಿಗಳ ಸಂಖ್ಯೆಯು ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಎಂಟು ಪಟ್ಟು ಏರಿಕೆಯಾಗಿದೆ. ಆದರೆ, ಮಣಿಪುರದ ಗ್ರಾಮೀಣ ಭಾಗಗಳಲ್ಲಿ ಸೈಕಲ್ ಬಳಸುವ ವಿದ್ಯಾರ್ಥಿಗಳ ಪ್ರಮಾಣ ಇಳಿಮುಖವಾಗಿದೆ.
ದೆಹಲಿಯ ಐಐಟಿ ಹಾಗೂ ನರ್ಸೀ ಮೊನಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಸಂಶೋಧಕರ ವರದಿಯು ಈ ಮೌನ ಕ್ರಾಂತಿಯ ಕುರಿತು ಮಾಹಿತಿ ನೀಡಿದೆ. ಈ ಸಂಶೋಧನಾ ಪ್ರಬಂಧವು ‘ಜನರಲ್ ಆಫ್ ಟ್ರಾನ್ಸ್‌ಪೋರ್ಟ್ ಜಿಯೊಗ್ರಫಿ’ ಎಂಬ ಪ್ರತಿಷ್ಠಿತ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
ಬಿಡಿಎಸ್ ಯೋಜನೆಯ ಪರಿಣಾಮಗಳ ಕುರಿತು ಸಂಶೋಧನೆ ಮಾಡಿರುವ ಒಂದೇ ಒಂದು ಪ್ರಬಂಧವನ್ನು ನಾವು ಕಂಡಿಲ್ಲ. ಅದಕ್ಕಾಗಿಯೇ ಇದೊಂದು ‘ಮೌನ’ ಕ್ರಾಂತಿ. ಲಿಂಗತ್ವದ ಆಧಾರದಲ್ಲಿ ಮನೆಯಿಂದ ಹೊರಗೆ ಕಾಲಿಡುವುದಕ್ಕೂ ತಾರತಮ್ಯ ಇರುವ ದೇಶದಲ್ಲಿ ಬಾಲಕಿಯರು ಬಿಡಿಎಸ್ ಯೋಜನೆಯ ಮೂಲಕ ಸೈಕಲ್ ಬಳಸಿಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ ಎನ್ನುವುದು ದೊಡ್ಡ ವಿಷಯವೇ ಆಗಿದೆ. ಅದರಿಂದಾಗಿಯೇ ಇದೊಂದು ಮೌನ ‘ಕ್ರಾಂತಿ’ಅದಿತಿ ಸೇಠ್, ನರ್ಸೀ ಮೊನಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಸಂಶೋಧಕಿ
2007, 2014, 2017 : ಸಂಶೋಧನೆ ನಡೆಸಿದ ವರ್ಷ
35 : ಸಂಶೋಧನೆ ನಡೆಸಿದ ರಾಜ್ಯ/ಕೇಂದ್ರಾಡಳಿತ ಪ್ರದೇಶ
5–17 ವರ್ಷ : ಸಂಶೋಧನೆಗಾಗಿ ಸಂದರ್ಶಿಸಿದವರ ವಯೋಮಾನ
ಗ್ರಾಮೀಣ/ನಗರ–ಬಾಲಕಿ/ಬಾಲಕ : ಸಂಶೋಧನೆಯ ಮಾನದಂಡ
ವರ್ಷ : ದೇಶದಲ್ಲಿ ಸೈಕಲ್ ಬಳಸಿ ಶಾಲೆಗೆ ತೆರಳುವ ವಿದ್ಯಾರ್ಥಿಗಳ ಪ್ರಮಾಣ
2007 : 6.6%
2017 : 11.2%
ವರ್ಷ : ಗ್ರಾಮೀಣ ಭಾಗದಲ್ಲಿ ಸೈಕಲ್ ಬಳಸಿ ಶಾಲೆಗೆ ತೆರಳುವ ವಿದ್ಯಾರ್ಥಿಗಳ ಪ್ರಮಾಣ
2007 : 6.3%
2017 : 12.3%
ವರ್ಷ : ನಗರ ಪ್ರದೇಶದಲ್ಲಿ ಸೈಕಲ್ ಬಳಸಿ ಶಾಲೆಗೆ ತೆರಳುವ ವಿದ್ಯಾರ್ಥಿಗಳ ಪ್ರಮಾಣ
2007 : 7.8%
2017 : 8.3%
3.6%: ಬಿಡಿಎಸ್ ಜಾರಿಯಲ್ಲಿರುವ ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಸೈಕಲ್ ಬಳಕೆಯಲ್ಲಿ ಆದ ಶೇಕಡವಾರು ಏರಿಕೆ
0.8% : ಬಿಡಿಎಸ್ ಜಾರಿಯಲ್ಲಿ ಇಲ್ಲದ ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಸೈಕಲ್ ಬಳಕೆಯಲ್ಲಿ ಆದ ಶೇಕಡವಾರು ಏರಿಕೆ
ಸೈಕಲ್ ಬಳಸುವ ಬಾಲಕಿಯರ ಪ್ರಮಾಣ 10 ಪಟ್ಟು ಏರಿಕೆಯಾದ ರಾಜ್ಯಗಳು
ತ್ರಿಪುರಾ
ಸೈಕಲ್ ಬಳಸುವ ಬಾಲಕಿಯರ ಪ್ರಮಾಣ ನಾಲ್ಕು ಪಟ್ಟು ಏರಿಕೆಯಾದ ರಾಜ್ಯಗಳು
ಅರುಣಾಚಲ ಪ್ರದೇಶ
ಗ್ರಾಮೀಣ ಭಾಗದಲ್ಲಿ ಸೈಕಲ್ ಬಳಸುವ ಬಾಲಕಿಯರ ಪ್ರಮಾಣ ಮೂರು ಪಟ್ಟು ಏರಿಕೆಯಾದ ರಾಜ್ಯಗಳು
ಬಿಹಾರ
ಪಶ್ಚಿಮ ಬಂಗಾಳ
ಗ್ರಾಮೀಣ ಭಾಗದಲ್ಲಿ ಸೈಕಲ್ ಬಳಸುವ ಬಾಲಕಿಯರ ಪ್ರಮಾಣ ದ್ವಿಗುಣಗೊಂಡ ರಾಜ್ಯಗಳು
ಅಸ್ಸಾಂ
ಛತ್ತೀಸಗಢ
ಜಾರ್ಖಂಡ್
ಮಧ್ಯ ಪ್ರದೇಶ
ಒಡಿಶಾ
ತಮಿಳುನಾಡು
ಉತ್ತರ ಪ್ರದೇಶ
ಬಿಡಿಎಸ್‌ನಿಂದಾಗಿ 6–7ನೇ ತರಗತಿಗಳಿಗೆ ಗ್ರಾಮೀಣ ಭಾಗದ ಬಾಲಕಿಯರ ದಾಖಲಾತಿಯು ದ್ವಿಗುಣಗೊಂಡಿದೆ
ಬಿಡಿಎಸ್‌ನಿಂದಾಗಿ 6–7ನೇ ತರಗತಿಗಳಿಗೆ ನಗರ ಭಾಗದ ಬಾಲಕಿಯರ ದಾಖಲಾತಿಯು 1.5ರಷ್ಟು ಏರಿಕೆಯಾಗಿದೆ
ಶೇ 70ಕ್ಕೂ ಅಧಿಕ ಗ್ರಾಮೀಣ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ದಾಖಲಾಗುವುದರಿಂದ ಬಿಡಿಎಸ್ ಯೋಜನೆಯ ಪ್ರಯೋಜನವು ಗ್ರಾಮೀಣ ಭಾಗದಲ್ಲಿಯೇ ಅಧಿಕವಾಗಿದೆ
ನಗರ ಪ್ರದೇಶದ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಅಧಿಕವಾಗಿ ದಾಖಲಾಗುವುದರಿಂದ ಬಿಡಿಎಸ್ ಯೋಜನೆಯು ಪ್ರಯೋಜನವು ಈ ಪ್ರದೇಶದಲ್ಲಿ ಆಗಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.