ADVERTISEMENT

ಮಹಾರಾಷ್ಟ್ರ ನೂತನ ಡಿಜಿಪಿಯಾಗಿ ರಶ್ಮಿ ಶುಕ್ಲಾ ನೇಮಕ; ಹುದ್ದೆಗೇರಿದ ಮೊದಲ ಮಹಿಳೆ

ಪಿಟಿಐ
Published 4 ಜನವರಿ 2024, 13:55 IST
Last Updated 4 ಜನವರಿ 2024, 13:55 IST
<div class="paragraphs"><p>ರಶ್ಮಿ ಶುಕ್ಲಾ</p></div>

ರಶ್ಮಿ ಶುಕ್ಲಾ

   

@DDNewslive ಎಕ್ಸ್ ಖಾತೆ ಚಿತ್ರ

ಮುಂಬೈ: ಹಿರಿಯ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಅವರು ಮಹಾರಾಷ್ಟ್ರದ ಪೊಲೀಸ್ ಮಹಾನಿರ್ದೇಶಕಿಯಾಗಿ (ಡಿಜಿಪಿ) ಗುರುವಾರ ನೇಮಕಗೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಈ ಉನ್ನತ ಹುದ್ದೆಗೇರಿದ ಮೊದಲ ಮಹಿಳೆ ಇವರಾಗಿದ್ದಾರೆ.

ADVERTISEMENT

ರಶ್ಮಿ ಅವರ ನೇಮಕ ಆದೇಶವನ್ನು ರಾಜ್ಯ ಗೃಹ ಇಲಾಖೆ ಗುರುವಾರ ಪ್ರಕಟಿಸಿದೆ. 1988ನೇ ವರ್ಷದ ಐಪಿಎಸ್ ಅಧಿಕಾರಿಯಾಗಿರುವ 59 ವರ್ಷದ ರಶ್ಮಿ, ಸದ್ಯ ಸಶಸ್ತ್ರ ಸೀಮಾಬಲದ ಡಿಐಜಿಯಾಗಿದ್ದಾರೆ.

ಡಿಜಿಪಿಯಾಗಿದ್ದ ರಜನೀಶ್ ಸೇಥ್ ಅವರು ಡಿ. 31ರಂದು ನಿವೃತ್ತಿಯಾದರು. ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫನಸಾಲ್ಕರ್ ಅವರು ಸದ್ಯ ಡಿಜಿಪಿ ಹುದ್ದೆಯನ್ನು ಹೆಚ್ಚುವರಿಯಾಗಿ ನಿಭಾಯಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.