ADVERTISEMENT

ಹಿರಿಯ ನಾಗರಿಕರಿಗೆ ಒಡನಾಟ ಸೇವೆ: ನವೋದ್ಯಮ ಮೇಲೆ ಹೂಡಿಕೆಗೆ ಒತ್ತು

ಪಿಟಿಐ
Published 16 ಆಗಸ್ಟ್ 2022, 16:25 IST
Last Updated 16 ಆಗಸ್ಟ್ 2022, 16:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಹಿರಿಯ ನಾಗರಿಕರಿಗೆ ಒಡನಾಟ ಸೇವೆಯನ್ನು ಒದಗಿಸುವ ಉದ್ದೇಶದ ನವೋದ್ಯಮಗಳ ಮೇಲೆ ಬಂಡವಾಳ ಹೂಡಲಾಗುವುದು ಎಂದು ಉದ್ಯಮಿ ರತನ್‌ ಟಾಟಾ ಮಂಗಳವಾರ ಪ್ರಕಟಿಸಿದರು.

ಟಾಟಾ ಸಮೂಹದಿಂದ ನಿವೃತ್ತರಾದ ಬಳಿಕ ರತನ್‌ ಟಾಟಾ ಅವರು ನವೋದ್ಯಮಗಳಿಗೆ ಉತ್ತೇಜನವನ್ನು ನೀಡುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಇದುವರೆಗೂ 50 ನವೋದ್ಯಮಗಳ ಮೇಲೆ ಬಂಡವಾಳ ಹೂಡಿಕೆ ಮಾಡಿದ್ದಾರೆ.

ಈಗ ಹಿರಿಯ ನಾಗರಿಕರಿಗೆ ಒಡನಾಟ ಸೇವೆ ಒದಗಿಸುವ ನವೋದ್ಯಮಗಳ ಮೇಲೆ ಟಾಟಾ ಸಮೂಹದ ಶಂತನು ನಾಯ್ಡು ಹೂಡಿಕೆ ಮಾಡುವರು. 33 ವರ್ಷದ ನಾಯ್ಡು, ಟಾಟಾ ಕಚೇರಿಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದು, ರತನ್ ಟಾಟಾ ಅವರಿಗೆ ನೆರವಾಗಿ 2018ರಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ಒಡನಾಟ ಬೇಕು ಎನ್ನಿಸುವಂತೆ ಏಕಾಂಗಿಯಾಗಿ ಇರಬೇಕಾದ ಕಾಲ ಬರುವವರೆಗೂ ಏಕಾಂಗಿತನದ ಪರಿವೆ ಇರುವುದಿಲ್ಲ ಎಂದು ಪ್ರತಿಕ್ರಿಯಿಸಿದ ರತನ್‌ ಟಾಟಾ ಅವರು, ಹೊಸ ರೀತಿಯ ನವೋದ್ಯಮದಲ್ಲಿ ಹೂಡಿಕೆ ಮಾಡುವ ನಾಯ್ಡು ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದರು.

‘ವಯಸ್ಸಾಗುವವರೆಗೂ ಯಾರೊಬ್ಬರು ಅಂತಹ ಸ್ಥಿತಿಯ ಬಗ್ಗೆ ಚಿಂತನೆ ಮಾಡುವುದಿಲ್ಲ. ಆ ಸಂದರ್ಭದಲ್ಲಿ ಒಡನಾಟ ಒದಗಿಸುವುದು ಸವಾಲಿನ ಕೆಲಸ. ಆದರೆ, ನಾವು ಹೇಗೋ ಆಗುತ್ತದೆ ಎಂಬಂತೆ ಪರಿಗಣಿಸಿದ್ದೇವೆ‘ ಎಂದು ಪ್ರತಿಕ್ರಿಯಿಸಿದರು.

ಪ್ರಸ್ತುತ ಒಂದು ಅಂದಾಜಿನ ಪ್ರಕಾರ, 1.5 ಕೋಟಿ ಹಿರಿಯ ನಾಗರಿಕರಿದ್ದಾರೆ. ಹೊಸ ನವೋದ್ಯಮಕ್ಕೆ ಉತ್ತಮ ಅವಕಾಶಗಳಿವೆ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.