ನವದೆಹಲಿ: ‘ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರಿಗೆ ನೆರವು ಮತ್ತು ಪರಿಹಾರ ಕಲ್ಪಿಸುವ ಪಿಎಂ ಕೇರ್ಸ್ ನಿಧಿಯ ಟ್ರಸ್ಟಿಗಳಾಗಿ ಟಾಟಾ ಸನ್ಸ್ ಮುಖ್ಯಸ್ಥ ರತನ್ ಟಾಟಾ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಟಿ.ಥಾಮಸ್, ಲೋಕಸಭೆಯ ಮಾಜಿ ಉಪ ಸಭಾಪತಿ ಕರಿಯಾ ಮುಂಡಾ ಅವರನ್ನು ನಾಮನಿರ್ದೇಶನ ಮಾಡಲಾಗಿದೆ’ ಎಂದು ಪ್ರಧಾನ ಮಂತ್ರಿಯವರ ಕಾರ್ಯಾಲಯ (ಪಿಎಂಒ) ಬುಧವಾರ ತಿಳಿಸಿದೆ.
‘ಇನ್ಫೊಸಿಸ್ ಫೌಂಡೇಷನ್‌ನ ಸುಧಾ ಮೂರ್ತಿ, ಮಾಜಿ ಸಿಎಜಿ ರಾಜೀವ್ ಮೆಹರಿಷಿ, ಟೀಚ್ ಫಾರ್ ಇಂಡಿಯಾ ಸಂಸ್ಥೆಯ ಸಹ ಸ್ಥಾಪಕ ಆನಂದ ಶಾ ಸೇರಿದಂತೆ ಕೆಲವು ಗಣ್ಯರನ್ನುಪಿ.ಎಂ ಕೇರ್ಸ್ ಸಲಹಾ ಮಂಡಳಿಗೆ ನಾಮನಿರ್ದೇಶನ ಮಾಡುವ ಕುರಿತು ನಿರ್ಣಯವನ್ನು ಟ್ರಸ್ಟ್ ಕೈಗೊಂಡಿದೆ.
Koo Appಪ್ರಧಾನಮಂತ್ರಿ ಕೇರ್ಸ್ ಫಂಡ್(ಪಿಎಂ ಕೇರ್ಸ್) ಸಲಹಾ ಮಂಡಳಿಗೆ ಆಯ್ಕೆಯಾಗಿರುವ ಇನ್ಫೋಸಿಸ್ ಸಂಸ್ಥೆಯ ಮಾಜಿ ಅಧ್ಯಕ್ಷರು ಶ್ರೀಮತಿ ಸುಧಾಮೂರ್ತಿ, ಶ್ರೀ ರತನ್ ಟಾಟಾ ಹಾಗೂ ನ್ಯಾಯಾಧೀಶರಾದ ಕೆ.ಟಿ ಥೋಮಸ್ ಅವರಿಗೆ ಅಭಿನಂದನೆಗಳು. ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಇವರಂತಹ ಹಿರಿಯರು ಸಲಹಾ ಮಂಡಳಿಗೆ ಆಯ್ಕೆಯಾಗಿರುವುದು ಹಲವು ಉತ್ತಮ ಕಾರ್ಯಗಳಿಗೆ ದಾರಿ ಮಾಡಿಕೊಡಲಿದೆ ಎಂಬ ನಂಬಿಕೆ ಇದೆ. #PMCaresFund https://www.businessinsider.in/india/news/ratan-tata-sudha-murthy-join-pm-cares-advisory-board/articleshow/94346711.cms- Pralhad Joshi (@joshipralhad) 21 Sep 2022
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.