ADVERTISEMENT

ಕೊರೊನಾ ವಿರುದ್ಧ ಸಮರ: ಟಾಟಾ ಸಮೂಹದಿಂದ ₹1,500 ಕೋಟಿ ದೇಣಿಗೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 20:15 IST
Last Updated 28 ಮಾರ್ಚ್ 2020, 20:15 IST
ರತನ್‌ ಟಾಟಾ
ರತನ್‌ ಟಾಟಾ   

ಮುಂಬೈ: ಕೊರೊನಾ ವಿರುದ್ಧದ ಹೋರಾಟಕ್ಕೆ ದೇಶದಾದ್ಯಂತ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗುತ್ತಿದೆ. ಸೋಂಕು ಹರಡುವುದನ್ನು ತಡೆಯಲು ಮತ್ತು ಸೋಂಕಿಗೆ ಒಳಗಾಗಿರುವವರ ರಕ್ಷಣೆಗಾಗಿ ಟಾಟಾ ಟ್ರಸ್ಟ್‌ ₹ 500 ಕೋಟಿ ಹಾಗೂ ಟಾಟಾ ಸನ್ಸ್ ₹1,000 ಕೋಟಿ ನೀಡಲಿದೆ.

‘ಇಂತಹ ಅಸಾಧಾರಣ ಸಂಕಷ್ಟದ ಸಂದರ್ಭದಲ್ಲಿ, ಕೋವಿಡ್‌–19ರ ವಿರುದ್ಧ ಹೋರಾಡಲು ಕೆಲವು ವೈದ್ಯಕೀಯ ಸಾಧನಗಳ ತುರ್ತು ಅಗತ್ಯ ಇದೆ ಎಂದು ನಂಬಿದ್ದೇನೆ’ ಎಂದು ಟಾಟಾ ಟ್ರಸ್ಟ್‌ ಅಧ್ಯಕ್ಷ ರತನ್‌ ಟಾಟಾ ಹೇಳಿದ್ದಾರೆ.

ಸೋಂಕಿನ ಪರಿಣಾಮ ಎದುರಿಸುತ್ತಿರುವ ಸಮುದಾಯವನ್ನು ರಕ್ಷಿಸಲು ಟಾಟಾ ಟ್ರಸ್ಟ್‌ ತನ್ನ ಬದ್ಧತೆಯನ್ನು ಮುಂದುವರಿಸಲಿದೆ. ವೈದ್ಯಕೀಯ ಸಿಬ್ಬಂದಿಯ ರಕ್ಷಣೆಯ ಸಾಧನಗಳು, ಉಸಿರಾಟದ ವ್ಯವಸ್ಥೆ, ತಪಾಸಣಾ ಕಿಟ್‌ಗಳು, ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಹೀಗೆ ಇನ್ನೂ ಹಲವು ಅಗತ್ಯಗಳಿಗಾಗಿ ₹500 ಕೋಟಿಯನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.