ADVERTISEMENT

ಉತ್ತರಾಖಂಡ ಹೈಕೋರ್ಟ್: ಕನ್ನಡಿಗ ನ್ಯಾ.ರವಿ ಮಳಿಮಠಗೆ ಹೊಣೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 19:50 IST
Last Updated 17 ಜುಲೈ 2020, 19:50 IST
ರವಿ ವಿ.ಮಳಿಮಠ
ರವಿ ವಿ.ಮಳಿಮಠ   

ಬೆಂಗಳೂರು: ಕನ್ನಡಿಗರಾದ ನ್ಯಾಯಮೂರ್ತಿ ರವಿ ವಿ. ಮಳಿಮಠ ಅವರಿಗೆಉತ್ತರಾಖಂಡ ಹೈಕೋರ್ಟ್‌ನ‌ ಮುಖ್ಯ ನ್ಯಾಯಮೂರ್ತಿ ಹುದ್ದೆಯಜವಾಬ್ದಾರಿಯನ್ನು ವಹಿಸಲಾಗಿದೆ.

ಅಲ್ಲಿನ ಮುಖ್ಯ ನ್ಯಾಯಮೂರ್ತಿ ರಮೇಶ್ ರಂಗನಾಥನ್ ಅವರ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನದ ಜವಾಬ್ದಾರಿಯನ್ನುಜುಲೈ 28ರಿಂದ ಮಳಿಮಠ ಅವರು ನಿರ್ವಹಿಸಲಿದ್ದಾರೆ. ರವಿ ವಿ. ಮಳಿಮಠ ಅವರು ನ್ಯಾಯಮೂರ್ತಿ ವಿ.ಎಸ್. ಮಳಿಮಠ ಅವರ ಪುತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT