ನವದೆಹಲಿ: ರಾಹುಲ್ ಗಾಂಧಿ ತಮ್ಮನ್ನು ತಾವು ಶಿವ ಭಕ್ತ ಅಂತ ಹೇಳುತ್ತಾರೆ.ಅವರ ಪಕ್ಷದ ನಾಯಕರೊಬ್ಬರು ಶಿವಲಿಂಗಕ್ಕೆ ಚಪ್ಪಲಿಯಲ್ಲಿ ಹೊಡೆಯಬೇಕೆಂದು ಕೆಲವು ಮೂಲಗಳು ಹೇಳಿವೆ ಎನ್ನುವ ಮೂಲಕ ಶಿವಲಿಂಗ ಮತ್ತು ಶಿವನ ಪಾವಿತ್ರ್ಯವನ್ನು ನಿಂದಿಸಿದ್ದಾರೆ ಎಂದು ಕೇಂದ್ರ ಕಾನೂನು ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಗುಡುಗಿದ್ದಾರೆ.
ಆರ್‌ಎಸ್‌ಎಸ್ ಪಾಲಿಗೆ ಪ್ರಧಾನಿ ನರೇಂದ್ರ ಮೋದಿ ಶಿವಲಿಂಗದ ಮೇಲಿರುವ ಚೇಳಿನಂತೆ, ಅದನ್ನು ಕೈಯಿಂದ ತೆಗೆದು ಬಿಸಾಡುವುದಕ್ಕೂ ಆಗಲ್ಲ, ಚಪ್ಪಲಿಯಿಂದ ಹೊಡೆಯಲೂ ಆಗಲ್ಲ' ಎಂದು ಆರ್‌ಎಸ್‌ಎಸ್‍ನ ವ್ಯಕ್ತಿಯೊಬ್ಬರು ಹೇಳಿದ್ದರು ಎಂಬ ಶಶಿ ತರೂರ್ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ
ತರೂರ್ ಅವರ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರವಿ ಶಂಕರ್ ಪ್ರಸಾದ್, ಇದೆಲ್ಲವೂ ದೇವರನ್ನು ನಿಂದಿಸುವ ಕೆಲಸ ಅಲ್ಲವೇ? ಇದೆಂಥಾ ಭಾಷೆ? ದೇವರು ಮತ್ತು ದೇವತೆಗಳನ್ನು ನಿಂದಿಸುವುದನ್ನು ದೇಶದ ಜನರು ಸಹಿಸುವುದಿಲ್ಲ.
ದೇಶದ ಜನರು ಮೋದಿಯವರನ್ನು ನೋಡುತ್ತಿದ್ದಾರೆ, ಅವರು ದೇಶದಲ್ಲಿ ಮಾತ್ರ ಅಲ್ಲ ವಿಶ್ವದಲ್ಲೇ ಖ್ಯಾತಿ ಹೊಂದಿದ್ದಾರೆ.ಅಂಥವರ ಬಗ್ಗೆ ಈ ರೀತಿ ಹೇಳುವುದೇ? ದೇಶದ ಜನರು ಇದನ್ನೆಲ್ಲಾ ನೋಡುತ್ತಿದ್ದಾರೆ. ಅವರೇ ನಿಮಗೆ ಉತ್ತರ ನೀಡುತ್ತಾರೆ. ತರೂರ್ ಹೇಳಿಕೆಗೆ ರಾಹುಲ್ ಗಾಂಧಿಯವರು ಕ್ಷಮೆ ಕೇಳಬೇಕೆಂದು ರವಿಶಂಕರ್ ಪ್ರಸಾದ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.