ಮುಂಬೈ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಿಸರ್ವ್ ಬ್ಯಾಂಕ್‌ನ ಗವರ್ನರ್ ಶಕ್ತಿಕಾಂತ ದಾಸ್ ರಾಜೀನಾಮೆಗೆ ಒತ್ತಾಯಿಸಿ ಮೂರು ಸ್ಥಳಗಳಲ್ಲಿ 11 ಬಾಂಬ್‌ಗಳನ್ನು ಇಡುವುದಾಗಿ ಬೆದರಿಕೆಯ ಇ-ಮೇಲ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ಕಳುಹಿಸಲಾಗಿದೆ.
ಇಮೇಲ್ ಕಳುಹಿಸಿದವರನ್ನು ಪತ್ತೆಹಚ್ಚಲು ಮುಂಬೈ ಪೊಲೀಸರು ಮತ್ತು ಭದ್ರತಾ ಪಡೆಗಳು ತಕ್ಷಣವೇ ತನಿಖೆ ಆರಂಭಿಸಿದ್ದಾರೆ.
ಮಾತಾ ರಾಮಾಭಾಯಿ ಅಂಬೇಡ್ಕರ್ ಮಾರ್ಗ್ ಪೊಲೀಸ್ ಠಾಣೆಯು ತನಿಖೆ ಕೈಗೊಂಡಿದೆ.
ಮುಂಬೈನ ಆರ್‌ಬಿಐ–ನ್ಯೂ ಸೆಂಟ್ರಲ್ ಬಿಲ್ಡಿಂಗ್ ಫೋರ್ಟ್, ಎಚ್‌ಡಿಎಫ್‌ಸಿ ಹೌಸ್–ಚರ್ಚ್‌ಗೇಟ್, ಐಸಿಐಸಿಐ ಬ್ಯಾಂಕ್ ಟವರ್ಸ್, ಬಾಂದ್ರಾ–ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಬಾಂಬ್ ಇಡುವುದಾಗಿ ಇ–ಮೇಲ್‌ನಲ್ಲಿ ಬೆದರಿಕೆ ಹಾಕಲಾಗಿದೆ.
khilafat.india@gmail.com. ಎಂಬ ಇ–ಮೇಲ್ ಅಡ್ರೆಸ್‌ನಿಂದ ಮೇಲ್ ಬಂದಿದೆ.
ಇ–ಮೇಲ್ ಕುರಿತ ಮಾಹಿತಿ ಬರುತ್ತಿದ್ದಂತೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಇತರೆ ಸಿಬ್ಬಂದಿ ಮೇಲ್‌ನಲ್ಲಿ ಉಲ್ಲೇಖಿಸಿರುವ ಸ್ಥಳಗಳಿಗೆ ತೆರಳಿ ತಪಾಸಣೆ ನಡೆಸಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.