ADVERTISEMENT

RBIಗವರ್ನರ್ ಶಕ್ತಿಕಾಂತ್ ದಾಸ್ ಆರೋಗ್ಯ ಸ್ಥಿರ; ಶೀಘ್ರ ಬಿಡುಗಡೆ: ಅಪೋಲೊ ಆಸ್ಪತ್ರೆ

ಪಿಟಿಐ
Published 26 ನವೆಂಬರ್ 2024, 9:09 IST
Last Updated 26 ನವೆಂಬರ್ 2024, 9:09 IST
ಶಕ್ತಿಕಾಂತ್ ದಾಸ್
ಶಕ್ತಿಕಾಂತ್ ದಾಸ್   

ಚೆನ್ನೈ: ‘ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಆಸಿಡಿಟಿ ಸಮಸ್ಯೆಯಿಂದ ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗ ಆರೋಗ್ಯವಾಗಿದ್ದಾರೆ’ ಎಂದು ಚೆನ್ನೈನ ಅಪೋಲೊ ಆಸ್ಪತ್ರೆ ಮಾಹಿತಿ ನೀಡಿದೆ.

‘ದಾಸ್‌ ಅವರ ಆರೋಗ್ಯದ ಬಗ್ಗೆ ಗಾಬರಿಪಡುವ ಅಗತ್ಯವಿಲ್ಲ. ಆದಷ್ಟು ಬೇಗ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು’ ಎಂದು ಅಪೋಲೊ ಆಸ್ಪತ್ರೆಯ ಡಾ. ಆರ್‌.ಕೆ. ವೆಂಕಟಾಸಲಮ್ ಅವರು ಬಿಡುಗಡೆ ಮಾಡಿರುವ ಮೆಡಿಕಲ್‌ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

ಕಾರ್ಯನಿಮಿತ್ತ ಚೆನ್ನೈಗೆ ತೆರಳಿದ್ದ ವೇಳೆ ಶಕ್ತಿಕಾಂತ್‌ ದಾಸ್‌ ಅವರಿಗೆ ಎದೆಯುರಿ ಕಾಣಿಸಿಕೊಂಡ ಹಿನ್ನೆಲೆ ಆ‌ಸ್ಪತ್ರೆಗೆ ದಾಖಲಾಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.