ADVERTISEMENT

ಲೋಕಸಭೆ ಭದ್ರತಾ ವೈಫಲ್ಯ: ಲಲಿತ್‌ ಝಾ ಕೋಲ್ಕತ್ತ ನಂಟು

ಪಿಟಿಐ
Published 14 ಡಿಸೆಂಬರ್ 2023, 16:19 IST
Last Updated 14 ಡಿಸೆಂಬರ್ 2023, 16:19 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೋಲ್ಕತ್ತ: ಸಂಸತ್ತಿನಲ್ಲಿ ಭದ್ರತೆ ಉಲ್ಲಂಘಿಸಿದ ಸಂಚುಕೋರರಿಗೆ ಕೋಲ್ಕತ್ತದ ನಂಟು ಇದೆ ಎನ್ನಲಾಗಿದೆ. ಪ್ರಮುಖ ಸಂಚುಕೋರ ಲಲಿತ್‌ ಝಾ ಈ ನಗರದ ನಿವಾಸಿ ಎಂದು ಹೇಳಲಾಗಿದೆ.

ಸೆಂಟ್ರಲ್‌ ಕೋಲ್ಕತ್ತದಲ್ಲಿ ನೆಲೆಸಿದ್ದು ಶಿಕ್ಷಕ ವೃತ್ತಿಯಲ್ಲಿರುವುದಾಗಿ ಝಾ ಹೇಳಿಕೊಂಡಿದ್ದರು. ಆದರೆ ಒಂದು ವರ್ಷದಿಂದ ಅವರು  ಈ ಸ್ಥಳದಲ್ಲಿ ಇರಲಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಈ ಸ್ಥಳದ ಜನರು ಝಾ ಅವರನ್ನು ಈ ಮೊದಲು ನೋಡಿದ್ದಾಗಿ ಸ್ಥಳೀಯ ಸುದ್ದಿ ವಾಹಿನಿಗಳಿಗೆ ಹೇಳಿಕೆ ನೀಡಿದ್ದಾರೆ. ಘಟನೆ ನಡೆದ ದಿನ ಮಧ್ಯಾಹ್ನ 1 ಗಂಟೆ ವೇಳೆಗೆ ಝಾ ಅವರು ತಮ್ಮನ್ನು ಸಂಪರ್ಕಿಸಿದ್ದರು ಎಂದು ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ  ವಿದ್ಯಾರ್ಥಿ ನೀಲಾಕ್ಷ ಎಂಬುವರು ಗುರುವಾರ ಹೇಳಿದ್ದಾರೆ.

ಲೋಕಸಭೆಯಲ್ಲಿ ಬಣ್ಣದ ಹೊಗೆ ಎದ್ದಿರುವ ದೃಶ್ಯ ಸೆರೆಹಿಡಿದ ವಿಡಿಯೊವನ್ನು ತಮ್ಮ ವಾಟ್ಸ್‌ಆ್ಯಪ್‌ನೊಂದಿಗೆ ಝಾ ಹಂಚಿಕೊಂಡಿದ್ದರು. ಈ ವೇಳೆ ತಾನು ಕಾಲೇಜಿನಲ್ಲಿದ್ದೆ ಎಂದು ನೀಲಾಕ್ಷ ಅವರು ‘ಎಬಿಪಿ ಆನಂದ’ ವಾಹಿನಿಗೆ ತಿಳಿಸಿದ್ದಾರೆ.

ಮಾಧ್ಯಮದಲ್ಲಿ ಇದನ್ನು ವೀಕ್ಷಿಸುವಂತೆ ಅವರು ತನಗೆ ಹೇಳಿದರು. ಆರಂಭದಲ್ಲಿ ವಿಡಿಯೊವನ್ನು ಸರಿಯಾಗಿ ನೋಡಲಿಲ್ಲ. ನಂತರದಲ್ಲಿ ಘಟನೆ ಎಲ್ಲಿ ನಡೆಯಿತು ಎಂದು ಕೇಳಿದಾಗ ಪ್ರತಿಕ್ರಿಯೆ ಲಭಿಸಲಿಲ್ಲ ಎಂದು ಅವರು ಹೇಳಿದ್ದಾರೆ.

ಏಪ್ರಿಲ್‌ನಲ್ಲಿ ಸೆಂಟ್ರಲ್‌ ಕೋಲ್ಕತ್ತದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಝಾ ಅವರ ಪರಿಚಯವಾಯಿತು. ಕೋಲ್ಕತ್ತದಲ್ಲಿ ನೆಲೆಸಿರುವುದಾಗಿ ಝಾ ಹೇಳಿದ್ದರು. ಆದರೆ ನಿರ್ದಿಷ್ಟ ಪ್ರದೇಶವನ್ನು ಹೆಸರಿಸಿರಲಿಲ್ಲ ಎಂದಿದ್ದಾರೆ.

ಬುಡಕಟ್ಟು ಜನರ ಶಿಕ್ಷಣ ಮತ್ತು ಇತರ ಕಲ್ಯಾಣ ಕಾರ್ಯಕ್ರಮದ ಬಗ್ಗೆ ಗಮನಹರಿಸುವ ತಮ್ಮ ಸಂಘಟನೆಗೆ ಝಾ ಅವರನ್ನು ಸೇರಿಸಿಕೊಳ್ಳಲು ಬಯಸಿ ಅವರನ್ನು ಸಂಪರ್ಕಿಸಿದ್ದಾಗಿ ಮತ್ತು ಅವರು ಸಂಘಟನೆಯ ಸದಸ್ಯರಾಗಿ ಮತ್ತು ಕೆಲ ತಿಂಗಳ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾಗಿ ನೀಲಾಕ್ಷ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.