ADVERTISEMENT

ರಾಜಕೀಯ ಲಾಭಕ್ಕಾಗಿ ಕೃಷಿ ಸಾಲ ಮನ್ನಾ ಮಾಡಬೇಡಿ: ಎಂ.ಎಸ್. ಸ್ವಾಮಿನಾಥನ್

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 14:13 IST
Last Updated 23 ಡಿಸೆಂಬರ್ 2018, 14:13 IST
ಎಂ.ಎಸ್. ಸ್ವಾಮಿನಾಥನ್
ಎಂ.ಎಸ್. ಸ್ವಾಮಿನಾಥನ್   

ನವದೆಹಲಿ: ಚುನಾವಣೆಗಳಲ್ಲಿ ಮತ ಗಳಿಸುವುದಕ್ಕಾಗಿ ಕೃಷಿ ಸಾಲ ಮನ್ನಾ ಮಾಡಬೇಡಿ ಎಂದುಹಸಿರು ಕ್ರಾಂತಿಯ ಹರಿಕಾರ, ಕೃಷಿ ವಿಜ್ಞಾನಿ ಪ್ರೊ.ಎಂ.ಎಸ್‌.ಸ್ವಾಮಿನಾಥನ್‌ ಅಭಿಪ್ರಾಯಪಟ್ಟಿದ್ದಾರೆ.ಕೃಷಿಯಲ್ಲಿನ ಕುಸಿತ ಆರ್ಥಿಕ ಕುಸಿತವೂ ಆಗಿದೆ.ಮಳೆ ಮತ್ತು ಮಾರುಕಟ್ಟೆ ಇವೆರಡೂ ಸಣ್ಣ ಹಿಡುವಳಿರೈತರನ್ನು ಬಾಧಿಸುತ್ತದೆ.ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಆರ್ಥಿಕತೆ ಕಾರ್ಯ ಸಾಧ್ಯವಾಗದ ನೀತಿಗಳನ್ನು ಪ್ರೋತ್ಸಾಹಿಸಬಾರದು ಎಂದು ಸ್ವಾಮಿನಾಥನ್ ಹೇಳಿದ್ದಾರೆ.

ನ್ಯೂಸ್ 18 ವಾಹಿನಿ ಜತೆ ಸಂವಾದ ನಡೆಸಿದ ಅವರು ಸಾಲಮನ್ನಾ ಕೃಷಿ ನೀತಿಯ ಭಾಗವಾಗಿರಬಾರದು. ಸಾಲ ತೀರಿಸಲು ರೈತರಿಗೆ ಕಷ್ಟ ಎದುರಾದ ಸಂದರ್ಭದಲ್ಲಿ ಮಾತ್ರ ಸಾಲ ಮನ್ನಾ ಮಾಡಬೇಕು.ಸಾಲಮನ್ನಾ ಪ್ರಕ್ರಿಯೆ ಪದೇ ಪದೇ ಮಾಡುತ್ತಿರಬಾರದು.ಕೃಷಿ ವಲಯವನ್ನು ಆರ್ಥಿಕವಾಗಿ ಬಲಿಷ್ಠವಾಗಿಸುವ ಕಾರ್ಯಗಳನ್ನು ಸರ್ಕಾರ ಮಾಡಬೇಕು ಎಂದಿದ್ದಾರೆ ಅವರು.

ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ.ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ₹2 ಲಕ್ಷ ಮೊತ್ತದವರೆಗಿನ ಸಾಲ ಮನ್ನಾ ಮಾಡುವ ಮೂಲಕ ಚುನಾವಣೆ ವೇಳೆ ನೀಡಿದ ಭರವಸೆ ಪೂರೈಸಿದೆ. ಕಳೆದ ವಾರ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ₹2 ಲಕ್ಷದ ವರೆಗಿನ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು.ಈ ರೀತಿ ಸಾಲ ಮನ್ನಾ ಮಾಡುವುದರಿಂದ 34 ಲಕ್ಷ ರೈತರಿಗೆ ಲಾಭ ಆದರೂ ರಾಜ್ಯದ ಬೊಕ್ಕಸಕ್ಕೆ ₹35,000-₹38,000 ಕೋಟಿ ನಷ್ಟವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ADVERTISEMENT

ಇತ್ತ ಛತ್ತೀಸಗಡದಲ್ಲಿ ಮುಖ್ಯಮಂತ್ರಿ ಭೂಪೇಶ್ ಭಗೇಲ್ ಅವರು ಸಣ್ಣ ಅವಧಿಯ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.