ಮುಂಬೈ:ಅನರ್ಹತೆಯ ಭೀತಿಯಲ್ಲಿರುವ 10 ಜನ ಅತೃಪ್ತ ಶಾಸಕರನ್ನು ಅನರ್ಹತೆ ಮಾಡಲು ಸಭಾಧ್ಯಕ್ಷರಿಗೆ ಸಾಧ್ಯವಿಲ್ಲ ಎಂದು ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೊಹ್ಟಗಿಅವರಿಗೆಪತ್ರ ಬರೆದಿದ್ದಾರೆ.
ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಅತೃಪ್ತ ಶಾಸಕರಿಗೆ ಪತ್ರ ಬರೆದಿರುವ ಮುಕುಲ್ ರೊಹ್ಟಗಿ ಸಭಾಧ್ಯಕ್ಷರು 10 ಜನ ಅತೃಪ್ತ ಶಾಸಕರನ್ನು ಅನರ್ಹತೆಗೊಳಿಸಲು ಸಾಧ್ಯವಿಲ್ಲ ಎಂದು ಅಭಯ ನೀಡಿರುವುದರಿಂದ ಅತೃಪ್ತ ಶಾಸಕರು ಕೊಂಚ ನಿರಾಳರಾಗಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜುಲೈ 11ರಂದು ವಿಪ್ ಜಾರಿ ಮಾಡಿದ್ದಾರೆ, ಇದಕ್ಕೂ ಮೊದಲೇ ಶಾಸಕರು ರಾಜೀನಾಮೆ ಸಲ್ಲಿಸಿರುವುದರಿಂದ ಈ ಶಾಸಕರ ಮೇಲೆ ವಿಪ್ ಜಾರಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಎರಡು ಪಕ್ಷಗಳವಿಪ್ ಜಾರಿಗೂ ಮುನ್ನವೇ ಶಾಸಕರು ರಾಜೀನಾಮೆ ನೀಡಿದ್ದಾರೆ. ಅಲ್ಲದೇ ರಾಜೀನಾಮೆ ಅಂಗೀಕಾರ ಮಾಡುವುದನ್ನು ಸಭಾಧ್ಯಕ್ಷರು ವಿಳಂಬ ಮಾಡುತ್ತಿದ್ದಾರೆ ಎಂದು ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಗಮನಕ್ಕೂ ತಂದಿರುವುದರಿಂದ ಅನರ್ಹತೆ ಸಾಧ್ಯವಿಲ್ಲ ಮುಕುಲ್ ರೊಹ್ಟಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.