ಔರಂಗಬಾದ್: ಎರಡು ವರ್ಷಗಳ ಹಿಂದೆ ನೋಟು ರದ್ದತಿಯಾದಾಗ ಬಿಜೆಪಿ ನಾಯಕರೊಬ್ಬರು ₹5 ಕೋಟಿ ಮೌಲ್ಯದ ಹಳೆ ನೋಟುಗಳನ್ನು ಬದಲಿಸಿಕೊಡುವುದಾಗಿ ಹೇಳಿ ಡೀಲ್ ಮಾಡಿದ್ದರು ಎಂದು ಮಾವೋವಾದಿಗಳು ಹೇಳಿದ್ದಾರೆ.
ಶನಿವಾರ ಬಿಹಾರದ ಔರಂಗಬಾದ್ ಜಿಲ್ಲೆಯಲ್ಲಿ ಮಾವೋವಾದಿಗಳು ವಿಧಾನಪರಿಷತ್ ಸದಸ್ಯ ರಾಜನ್‌ಕುಮಾರ್ ಅವರ ಮನೆಯ ಮೇಲೆ ದಾಳಿ ಮಾಡಿದ್ದರು.ಈ ದಾಳಿಯಲ್ಲಿ 10 ವಾಹನಗಳಿಗೆ ಬೆಂಕಿ ಇಟ್ಟ ನಕ್ಸಲರು ರಾಜನ್ ಕುಮಾರ್ ಅವರ ಚಿಕ್ಕಪ್ಪ ನರೇಂದ್ರ ಸಿಂಗ್ (55) ಅವರನ್ನು ಹತ್ಯೆ ಮಾಡಿದ್ದರು.
ಸೋಮವಾರ ಔರಂಗಾಬಾದ್‍ನಲ್ಲಿ ಮಾವೋವಾದಿಗಳು ಕರಪತ್ರ ಅಂಟಿಸಿದ್ದು, ರಾಜನ್ ಕುಮಾರ್ ಮತ್ತು ಅವರ ಸಂಬಂಧಿ ನೋಟು ಬದಲಾಯಿಸಲು ಸಹಾಯ ಮಾಡುವುದಾಗಿ ಹೇಳಿದ್ದರು.ರಾಜನ್ ಸಿಂಗ್ ಅವರು ₹5 ಕೋಟಿ ಮೌಲ್ಯದ ಹಳೆ ನೋಟು ಪಡೆದಿದ್ದು, ₹2 ಕೋಟಿ ಮೌಲ್ಯದ ಹಳೆ ನೋಟನ್ನು ಅವರ ಸಂಬಂಧಿ ಪಡೆದಿದ್ದರು.
ಆದರೆ ರಾಜನ್ ಕುಮಾರ್ ಹಳೆ ನೋಟುಗಳನ್ನು ನಮಗೆ ಬದಲಿಸಿಕೊಟ್ಟಿಲ್ಲ. ಆ ಹಳೆ ನೋಟುಗಳನ್ನೂ ವಾಪಸ್ ಕೊಟ್ಟಿಲ್ಲ ಎಂದು ನಕ್ಸಲರು ವಾದಿಸಿದ್ದಾರೆ.
ಆರೋಪ ಸುಳ್ಳು
ಮಾವೋವಾದಿಗಳ ಈ ಆರೋಪ ಸುಳ್ಳು.ತಮ್ಮ ಮನೆ ಮೇಲಿನ ದಾಳಿಗೆ ಪೊಲೀಸರು ಮತ್ತು ಸರ್ಕಾರ ಕಾರಣ ಎಂದಿದ್ದಾರೆ ರಾಜನ್ ಕುಮಾರ್.ರಾಜ್ಯ ಸರ್ಕಾರದ ಆಡಳಿತದಲ್ಲಿನ ಲೋಪವೇ ಗ್ರಾಮದ ಮೇಲೆ ಮಾವೋವಾದಿ ದಾಳಿಗೆ ಕಾರಣ ಎಂದು ರಾಜನ್ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.