ADVERTISEMENT

ಮಹಾರಾಷ್ಟ್ರ ರೈಲ್ವೆಗೆ ₹13,539 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 11:10 IST
Last Updated 4 ಫೆಬ್ರುವರಿ 2023, 11:10 IST
ಅಶ್ವಿನ್‌ ವೈಷ್ಣವ್‌ 
ಅಶ್ವಿನ್‌ ವೈಷ್ಣವ್‌    

ಮುಂಬೈ: ಮಹಾರಾಷ್ಟ್ರ ರೈಲ್ವೆಗೆ 2023–24ರ ಕೇಂದ್ರ ಬಜೆಟ್‌ನಲ್ಲಿ ದಾಖಲೆಯ ₹13,539 ಕೋಟಿ ಅನುದಾನ ನೀಡಿರುವುದು ರಾಜ್ಯದ ಮೇಲೆ ‘ಅತ್ಯುತ್ತಮ ಪರಿಣಾಮ ಬೀರಲಿದೆ’ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಶುಕ್ರವಾರ ಹೇಳಿದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ದೆಹಲಿಯಿಂದ ಸುದ್ದಿಗೋಷ್ಠಿ ನಡೆಸಿದ ಅವರು, ಮಹಾರಾಷ್ಟ್ರಕ್ಕೆ 2023–24ರ ಬಜೆಟ್‌ನಲ್ಲಿ ನೀಡಲಾಗಿರುವ ಅನುದಾನವು 2009ರಿಂದ 2014ರ ಒಳಗೆ ನೀಡಲಾಗಿರುವ ಬಜೆಟ್‌ನ ಸರಾಸರಿಗಿಂತ 11 ಪಟ್ಟು ಅಧಿಕ ಎಂದರು.

ಏಕನಾಥ ಶಿಂದೆ ನೇತೃತ್ವದ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಉತ್ತಮ ಸಹಕಾರ ದೊರಕುತ್ತಿದೆ ಎಂದು ಹೇಳಿದ ಅವರು, ಉದ್ಧವ್‌ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರವಿದ್ದಾಗ ಮುಂಬೈ– ಅಹಮದಾಬಾದ್‌ ಬುಲೆಟ್‌ ರೈಲು ಯೋಜನೆಗೆ ಅನುಮತಿ ದೊರೆತಿರಲಿಲ್ಲ ಎಂದರು.

ADVERTISEMENT

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ನಿರ್ಮಾಣ ವೇಗ ಹೆಚ್ಚಿಸಲಾಗಿದೆ. ಒಂದು ರೈಲನ್ನು 7ರಿಂದ 9 ದಿನಗಳ ಒಳಗೆ ತಯಾರಿಸಲಾಗುತ್ತಿದೆ. ಮಹಾರಾಷ್ಟ್ರದ 123 ರೈಲು ನಿಲ್ದಾಣಗಳ ಆಧುನೀಕರಣ ಮತ್ತು ಮರುಸ್ಥಾಪನೆ ಮಾಡಲಾಗುವುದು. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ ರೈಲ್ವೇ ನಿಲ್ದಾಣದ ಆಧುನೀಕರಣಕ್ಕಾಗಿ ಮಾರ್ಚ್‌ ಕಡೆಯಲ್ಲಿ ಟೆಂಡರ್‌ ಕರೆಯಲಾಗುವುದು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.