ADVERTISEMENT

ರುಬೈಯಾ ರಕ್ಷಿಸಲು ಉಗ್ರರ ಬಿಡುಗಡೆ ಮಾಡಿದ್ದೇ ಭಯೋತ್ಪಾದನೆಗೆ ಕಾರಣ: ಅಬ್ದುಲ್ಲಾ

ಜಮ್ಮು–ಕಾಶ್ಮೀರದಲ್ಲಿ

ಪಿಟಿಐ
Published 19 ಸೆಪ್ಟೆಂಬರ್ 2024, 23:30 IST
Last Updated 19 ಸೆಪ್ಟೆಂಬರ್ 2024, 23:30 IST
ಫಾರೂಕ್‌ ಅಬ್ದುಲ್ಲಾ
ಫಾರೂಕ್‌ ಅಬ್ದುಲ್ಲಾ   

ಜಮ್ಮು: 1989ರಲ್ಲಿ ಅಪಹರಣಗೊಂಡಿದ್ದ ಆಗಿನ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್‌ ಸಯೀದ್‌ ಪುತ್ರಿ, ರುಬೈಯಾ ಸಯೀದ್‌ ರಕ್ಷಿಸುವುದಕ್ಕಾಗಿ ಉಗ್ರರನ್ನು ಬಿಡುಗಡೆ ಮಾಡಿದ್ದೇ ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದನೆ ಬೆಳೆಯಲು ಕಾರಣಗಳಲ್ಲೊಂದು ಎಂದು ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ಗುರುವಾರ ಹೇಳಿದ್ದಾರೆ.

ಜಮ್ಮು–ಕಾಶ್ಮೀರದ ‘ನಾಶ’ಕ್ಕೆ ಎನ್‌ಸಿ, ಕಾಂಗ್ರೆಸ್‌ ಹಾಗೂ ಪಿಡಿಪಿ ಕಾರಣ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆಗೆ ಅವರು ತಿರುಗೇಟು ನೀಡಿದ್ದಾರೆ.

‘1999ರಲ್ಲಿ ಇಂಡಿಯನ್‌ ಏರ್‌ಲೈನ್ಸ್‌ ವಿಮಾನವನ್ನು (ಐಸಿ–814) ಅಪಹರಿಸಿ ಅಫ್ಗಾನಿಸ್ತಾನದ ಕಂದಹಾರಕ್ಕೆ ಒಯ್ಯಲಾಗಿತ್ತು. ಆ ಸಂದರ್ಭದಲ್ಲಿಯೂ, ವಿಮಾನದಲ್ಲಿದ್ದವರ ರಕ್ಷಣೆಗಾಗಿ ಉಗ್ರರನ್ನು ಬಿಡುಗಡೆ ಮಾಡಿದ್ದು ಯಾರು? ಇದು ಕೂಡ ಭಯೋತ್ಪಾದನೆ ಬೆಳೆಯಲು ಕಾರಣ’ ಎಂದಿದ್ದಾರೆ.

ADVERTISEMENT

‘1947ರಲ್ಲಿ ದೇಶ ವಿಭಜನೆಗೊಂಡ ವೇಳೆ ನ್ಯಾಷನಲ್‌ ಕಾನ್ಫರೆನ್ಸ್‌ ಇದ್ದಿದ್ದರಿಂದ ಜಮ್ಮು–ಕಾಶ್ಮೀರ ಭಾರತದಲ್ಲಿಯೇ ಉಳಿಯಿತು. ಇಲ್ಲದಿದ್ದರೆ ಇದು ಪಾಕಿಸ್ತಾನಕ್ಕೆ ಸೇರುತ್ತಿತ್ತು. ಈ ಕಾರಣಕ್ಕೆ ಜನರು ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷಕ್ಕೆ ಕೃತಜ್ಞರಾಗಿರಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.