ನವದೆಹಲಿ: ಕಳೆದ 10 ವರ್ಷಗಳಲ್ಲಿ ಭಾರತದ ಬ್ಯಾಂಕಿಂಗ್ ಕ್ಷೇತ್ರವು ಮೊದಲ ಬಾರಿಗೆ ₹3 ಲಕ್ಷ ಕೋಟಿ ನಿವ್ವಳ ಲಾಭ ದಾಟುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಾವು (ಬಿಜೆಪಿ) ಅಧಿಕಾರಕ್ಕೆ ಬಂದಾಗ, ಯುಪಿಎ ಸರ್ಕಾರದ ಫೋನ್ ಬ್ಯಾಂಕಿಂಗ್ ನೀತಿಯಿಂದಾಗಿ ನಮ್ಮ ಬ್ಯಾಂಕ್‌ಗಳು ನಷ್ಟ ಮತ್ತು ಹೆಚ್ಚಿನ ಎನ್‌ಪಿಎಗಳಿಂದ ತತ್ತರಿಸಿದ್ದವು. ಬಡವರಿಗೆ ಬ್ಯಾಂಕ್‌ಗಳ ಬಾಗಿಲು ಮುಚ್ಚಲ್ಪಟ್ಟಿದ್ದವು. ಆದರೆ, ಈಗ ಬ್ಯಾಂಕಿಂಗ್ ಕ್ಷೇತ್ರದಲ್ಲಾಗಿರುವ ಸುಧಾರಣೆಯು ಬಡವರು, ರೈತರು ಮತ್ತು ಎಂಎಸ್‌ಎಂಇಗಳಿಗೆ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಹೆಚ್ಚಿನ ಸಾಲ ಲಭ್ಯತೆಯನ್ನು ಒದಗಿಸಲು ಸಹಾಯ ಮಾಡುತ್ತದೆ’ ಎಂದು ಹೇಳಿದ್ದಾರೆ.
2024ರ ಆರ್ಥಿಕ ವರ್ಷದಲ್ಲಿ ಬ್ಯಾಂಕಿಂಗ್ ವಲಯದ ನಿವ್ವಳ ಲಾಭವು ಮೊದಲ ಬಾರಿಗೆ ₹3 ಲಕ್ಷ ಕೋಟಿ ದಾಟಿದೆ ಎಂಬ ಮಾಧ್ಯಮ ವರದಿಯನ್ನು ಆಧಾರಿಸಿ ಪ್ರಧಾನಿ ಮೋದಿ ಅವರು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.