ADVERTISEMENT

ಸಾಯಿಬಾಬಾ ಮೂರ್ತಿ ತೆರವು: ಸನಾತನ ರಕ್ಷಣಾ ದಳದ ಮುಖ್ಯಸ್ಥ ಪೊಲೀಸ್ ವಶಕ್ಕೆ

ಪಿಟಿಐ
Published 3 ಅಕ್ಟೋಬರ್ 2024, 6:16 IST
Last Updated 3 ಅಕ್ಟೋಬರ್ 2024, 6:16 IST
<div class="paragraphs"><p>ವಾರಣಸಿಯಲ್ಲಿ ಸಾಯಿಬಾಬಾ ಮೂರ್ತಿ ತೆರವು</p></div>

ವಾರಣಸಿಯಲ್ಲಿ ಸಾಯಿಬಾಬಾ ಮೂರ್ತಿ ತೆರವು

   

ಚಿತ್ರಕೃಪೆ:@DrJain21

ವಾರಾಣಸಿ(ಉತ್ತರ ಪ್ರದೇಶ): ದೇಗುಲಗಳಿಂದ ಸಾಯಿಬಾಬಾ ಮೂರ್ತಿ ತೆರವುಗೊಳಿಸುವ ಅಭಿಯಾನ ಆರಂಭಿಸಿರುವ ಸನಾತನ ರಕ್ಷಣಾ ದಳದ ಮುಖ್ಯಸ್ಥ ಅಜಯ್‌ ಶರ್ಮ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

ADVERTISEMENT

ಶಾಂತಿ, ಸುವ್ಯವಸ್ಥೆಗೆ ಭಂಗ ತಂದ ಆರೋಪದ ಮೇಲೆ ಶರ್ಮ ಅವರನ್ನು ಬುಧವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಗೌರವ್ ಬನ್ಸ್ವಾಲ್ ತಿಳಿಸಿದ್ದಾರೆ.

ಲಖನೌನ ಪ್ರಸಿದ್ಧ ಬಡಾ ಗಣೇಶ ದೇವಸ್ಥಾನ ಸೇರಿದಂತೆ 14 ದೇವಸ್ಥಾನಗಳಿಂದ ಸಾಯಿಬಾಬಾ ಮೂರ್ತಿಯನ್ನು ತೆರವುಗೊಳಿಸಲಾಗಿದೆ. ಇನ್ನೂ 50 ದೇವಸ್ಥಾಗಳಿಂದ ಮೂರ್ತಿ ತೆರವುಗೊಳಿಸುವುದಾಗಿ ಅಜಯ್‌ ಶರ್ಮ ಹೇಳಿದ್ದರು.

ಶರ್ಮ ಅವರ ಈ ನಡೆಯನ್ನು ಸಾಯಿಬಾಬಾ ಭಕ್ತರು ವಿರೋಧಿಸಿದ್ದು, ದೇವಾಲಯಗಳ ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಬುಧವಾರ ಸಾಯಿಬಾಬಾ ಮಂದಿರಗಳ ವ್ಯವಸ್ಥಾಪಕರ ಸಭೆ ನಡೆದಿದ್ದು, ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಲು ನಿರ್ಧರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.