ರಾಯಪುರ: ಸಲ್ಲೇಖನ ವ್ರತ ಕೈಗೊಂಡಿದ್ದ ಜೈನ ಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜ ಅವರು ಭಾನುವಾರ ಛತ್ತಿಸಗಢದ ಚಂದ್ರಗಿರಿ ತೀರ್ಥದಲ್ಲಿ ನಿಧನರಾಗಿದ್ದಾರೆ.
‘ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಮುನಿಗಳು ಮೂರು ದಿನಗಳಿಂದ ಸಲ್ಲೇಖನ ವ್ರತದಲ್ಲಿದ್ದರು. ತಡರಾತ್ರಿ 2:35ರ ವೇಳೆಗೆ ನಿಧನರಾದರು ಎಂದು’ ಅಧಿಕೃತ ಪ್ರಕಟಣೆ ತಿಳಿಸಿದೆ.
‘ಜೈನ ಪರಂಪರೆಯ ಶ್ರೇಷ್ಠ ದಿಗಂಬರರಾಗಿದ್ದ, ವರ್ಧಮಾನರೆಂದೇ ಹೆಸರಾಗಿದ್ದ ಆಚಾರ್ಯ ವಿದ್ಯಾಸಾಗರ ಮಹಾರಾಜರು ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾನುವಾರ ಅರ್ಧ ದಿನದ ಶೋಕಾಚರಣೆಯನ್ನು ಘೋಷಿಸಲಾಗಿದೆ’ ಎಂದು ಛತ್ತಿಸಗಢ ಸರ್ಕಾರ ಹೇಳಿದೆ.
ಸಲ್ಲೇಖನ ವ್ರತವು ಸ್ವಯಂಪ್ರೇರಿತವಾಗಿ ಉಪವಾಸವನ್ನು ಕೈಗೊಂಡು ಸಮಾಧಿ ಸ್ಥಿತಿಗೆ ತಲುಪುವ ಆಚರಣೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.