ADVERTISEMENT

ಮಲಯಾಳಂ ಕವಿ ಪೂವಾಚಲ್ ಖಾದರ್ ನಿಧನ

ಪಿಟಿಐ
Published 22 ಜೂನ್ 2021, 7:23 IST
Last Updated 22 ಜೂನ್ 2021, 7:23 IST
ಪೂವಾಚಲ್ ಖಾದರ್    -ಟ್ವಿಟರ್‌ ಚಿತ್ರ
ಪೂವಾಚಲ್ ಖಾದರ್    -ಟ್ವಿಟರ್‌ ಚಿತ್ರ   

ತಿರುವನಂತಪುರ: ಮಲಯಾಳಂನ ಪ್ರಸಿದ್ಧ ಗೀತ ರಚನೆಕಾರ, ಕವಿ ಪೂವಾಚಲ್ ಖಾದರ್ ಅವರು (73) ಮಂಗಳವಾರ ನಿಧನರಾದರು.

‘ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜ್‌ ಮತ್ತು ಆಸ್ಪತ್ರೆಯಲ್ಲಿ ಕೋವಿಡ್‌–19ರ ಚಿಕಿತ್ಸೆ ಪಡೆಯುತ್ತಿದ್ದ ಪೂವಾಚಲ್ ಅವರು ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು’ ಎಂದು ಮೂಲಗಳು ತಿಳಿಸಿವೆ.

ಪೂವಾಚಲ್‌ ಖಾದರ್‌ ಅವರು ಐದು ದಶಕಗಳಲ್ಲಿ 400ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸುಮಾರು 1500 ಗೀತೆಗಳನ್ನು ರಚಿಸಿದ್ದಾರೆ.

ADVERTISEMENT

‘ಪೂಮನಮೆ’ (ನಿರಕೂಟ್ಟು), ‘ಏದೋ ಜನ್ಮ ಕಲ್ಪಾನಾಯಿ’ (ಪಲಂಗಲ್‌) ಸೇರಿದಂತೆ ಹಲವು ಪ್ರಸಿದ್ಧ ಗೀತೆಗಳನ್ನು ಅವರು ಬರೆದಿದ್ದಾರೆ. ಅವರು 1972ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ಈ ಬಗ್ಗೆ ಕಂಬನಿ ಮಿಡಿದಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು,‘ ಪೂವಾಚಲ್‌ ಖಾದರ್‌ ಅವರ ನಿಧನದಿಂದಾಗಿ ಸಾಹಿತ್ಯ ಜಗತ್ತಿಗೆ ತುಂಬಲಾಗದ ನಷ್ಟ ಉಂಟಾಗಿದೆ. ಪೂವಾಚಲ್‌ ಅವರು ಬಹುಶಃ ಮಲಯಾಳಂ ಭಾಷೆಯಲ್ಲಿ ಅತಿ ಹೆಚ್ಚು ಗೀತೆಗಳನ್ನು ಬರೆದ ಗೀತರಚನೆಕಾರರಾಗಿರಬಹುದು’ ಎಂದರು.

ಕೇಂದ್ರ ಸಚಿವ ವಿ.ಮುರುಳಿಧರನ್‌ ಅವರೂ ಕಂಬನಿ ಮಿಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.