ಇಂಫಾಲ್: ಔಟರ್ ಮಣಿಪುರ ಲೋಕಸಭಾ ಕ್ಷೇತ್ರದ ಆರು ಮತಗಟ್ಟೆಗಳಲ್ಲಿ ಏಪ್ರಿಲ್ 30ರಂದು ಮರು ಮತದಾನ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಖ್ರುಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 4 ಹಾಗೂ ಚಿನಾಗಿ ವಿಧಾನಸಭಾ ಕ್ಷೇತ್ರ ಹಾಗೂ ಸೇನಾಪತಿಯ ಕರೊಂಗ್‌ನ ತಲಾ ಒಂದು ಮತಗಟ್ಟೆಗಳ ಮತದಾನವನ್ನು ಅನೂರ್ಜಿತ ಎಂದು ಘೋಷಿಸಲಾಗಿದ್ದು, ಏ. 30ರಂದು ಮರುಮತದಾನ ನಡೆಸಲಾಗುವುದು ಎಂದು ಮಣಿಪುರದ ಮುಖ್ಯ ಚುನಾವಣಾಧಿಕಾರಿ ಕಚೇರಿ ಹೊರಡಿಸಿದ ಅಧಿಸೂಚನೆ ತಿಳಿಸಿದೆ.
ಏಪ್ರಿಲ್ 26ರಂದು ಮತದಾನ ನಡೆದಿದ್ದು, ಈ ಆರು ಮತಗಟ್ಟೆಗಳ ಪೈಕಿ ನಾಲ್ಕರಲ್ಲಿ ಮತದಾನ ಪೂರ್ಣಗೊಳ್ಳುವ ಮುನ್ನವೇ ಅಪರಿಚಿತ ವ್ಯಕ್ತಿಗಳು ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಹಾನಿಗೊಳಿಸಿದ್ದರು. ಒಂದು ಮತಗಟ್ಟೆಯಲ್ಲಿ ಇವಿಎಂ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ವರದಿಯಾಗಿತ್ತು. ಮತ್ತೊಂದು ಮತಗಟ್ಟೆಯಲ್ಲಿ ಬೆದರಿಕೆ ಕಾರಣ ಮತದಾನವನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ.
ಏಪ್ರಿಲ್ 26 ರಂದು ನಡೆದ ಚುನಾವಣೆಯಲ್ಲಿ ಔಟರ್ ಮಣಿಪುರ ಲೋಕಸಭಾ ಕ್ಷೇತ್ರದ 28 ವಿಧಾನಸಭಾ ಕ್ಷೇತ್ರಗಳ 13 ಮತಗಟ್ಟೆಯಲ್ಲಿ ಸುಮಾರು 4.84 ಲಕ್ಷ ಮತದಾರರಲ್ಲಿ ಶೇ 76.06 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.