ನವದೆಹಲಿ (ಪಿಟಿಐ): ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತರಿಸಲಾಗಿದ್ದ 20 ವಯಸ್ಕ ಚೀತಾಗಳಲ್ಲಿ ಐದು ಚೀತಾಗಳು ಮೃತಪಟ್ಟಿರುವುದು ನೈಸರ್ಗಿಕ ಕಾರಣಗಳಿಂದಾಗಿ ಹೊರತು ರೇಡಿಯೊ ಕಾಲರ್‌ಗಳಿಂದ ಅಲ್ಲ ಎಂದು ಕೇಂದ್ರ ಪರಿಸರ ಸಚಿವಾಲಯವು ಹೊರಡಿಸಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.
‘ರೇಡಿಯೊ ಕಾಲರ್‌ಗಳಿಂದಾಗಿ ಚೀತಾಗಳು ಸಾವಿಗೀಡಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ವರದಿಗಳು ಊಹೆಗಳನ್ನು ಆಧರಿಸಿವೆ ಮತ್ತು ಅದಕ್ಕೆ ವೈಜ್ಞಾನಿಕ ಆಧಾರವಿಲ್ಲ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಚೀತಾ ಯೋಜನೆಗೆ ಉತ್ತೇಜನ ನೀಡಲು ಚೀತಾ ಸಂಶೋಧನಾ ಕೇಂದ್ರ ಸೇರಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರದ ಚೀತಾ ಯೋಜನಾ ಸಮಿತಿಯು ಯೋಜನೆಯ ಅಭಿವೃದ್ಧಿಯನ್ನು ಕೂಲಂಕುಶವಾಗಿ ಪರಿಶೀಲಿಸುತ್ತಿದೆ. ಯೋಜನೆಯ ಬೆಳವಣಿಗೆ ಕುರಿತು ಸಮಿತಿ ತೃಪ್ತಿ ಹೊಂದಿದೆ ಎಂದು ಹೇಳಲಾಗಿದೆ.
ರೇಡಿಯೊ ಕಾಲರ್‌ಗಳಿಂದ ಚೀತಾಗಳು ಗಾಯಗೊಂಡು, ಬಳಿಕ ಸೋಂಕಿಗೆ ಒಳಗಾಗಿ ಮೃತಪಟ್ಟಿವೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.