ADVERTISEMENT

ಪೇಜಾವರ ಶ್ರೀ, ಜಾರ್ಜ್‌ ಫರ್ನಾಂಡಿಸ್, ಅರುಣ್ ಜೇಟ್ಲಿ, ಸುಷ್ಮಾಗೆ ಪದ್ಮ ವಿಭೂಷಣ

ಕರ್ನಾಟಕದ ಹರೇಕಳ ಹಾಜಬ್ಬ, ತುಳಸಿ ಗೌಡ ಸೇರಿ ಅನೇಕ ಸಾಧಕರಿಗೆ ಪದ್ಮ ಶ್ರೀ

ಏಜೆನ್ಸೀಸ್
Published 25 ಜನವರಿ 2020, 16:18 IST
Last Updated 25 ಜನವರಿ 2020, 16:18 IST
ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ
ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ   
""

ನವದೆಹಲಿ:ಇತ್ತೀಚೆಗೆ ನಿಧನರಾದ ಪೇಜಾವರವಿಶ್ವೇಶ ತೀರ್ಥ ಸ್ವಾಮೀಜಿ, ಕೇಂದ್ರದ ಮಾಜಿ ಸಚಿವರಾದ ಜಾರ್ಜ್‌ ಫರ್ನಾಂಡಿಸ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಅವರಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆಯಾಗಿದೆ.

71ನೇ ಗಣರಾಜ್ಯೋತ್ಸವದ ಮುನ್ನಾ ದಿನವಾದ ಶನಿವಾರ ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.

ಅಕ್ಷರ ಸಂತ ಎಂದೇ ಪ್ರಸಿದ್ಧರಾಗಿರುವಹರೇಕಳ ಹಾಜಬ್ಬ, ಹಾಲಕ್ಕಿ‌ ಸಮುದಾಯದ ತುಳಸಿ ಗೌಡ ಸೇರಿದಂತೆ ಅನೇಕ ಸಾಧಕರಿಗೆ ಪದ್ಮ ಶ್ರೀ ಪ್ರಶಸ್ತಿ ಘೋಷಣೆಯಾಗಿದೆ.

ADVERTISEMENT
ತುಳಸಿ ಗೌಡ ಮತ್ತು ಹರೇಕಳ ಹಾಜಬ್ಬ

ಹರೇಕಳ ಹಾಜಬ್ಬ ಅವರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು ಸಮಾಜಸೇವೆ (ಶಿಕ್ಷಣ) ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯವರಾದತುಳಸಿ ಗೌಡ ಅವರಿಗೆ ಸಮಾಜ ಸೇವೆ (ಪರಿಸರ) ಕ್ಷೇತ್ರದಲ್ಲಿ ಪ್ರಶಸ್ತಿ ಘೋಷಣೆಯಾಗಿದೆ.

ಪದ್ಮ ಶ್ರೀ ಪ್ರಶಸ್ತಿಗೆ ಆಯ್ಕೆಯಾದ ಇತರರು

ಹೆಸರು– ಸಾಧನೆಯ ಕ್ಷೇತ್ರ – ರಾಜ್ಯ

ಎಂ.ಪಿ.ಗಣೇಶ್‌ - ಕ್ರೀಡೆ - ಕರ್ನಾಟಕ

ಡಾ. ಬೆಂಗಳೂರು ಗಂಗಾಧರ – ವೈದ್ಯಕೀಯ - ಕರ್ನಾಟಕ

ಭರತ್‌ ಗೋಯೆಂಕಾ – ವ್ಯಾಪಾರ ಮತ್ತು ಉದ್ಯಮ – ಕರ್ನಾಟಕ

ಕೆ.ವಿ.ಸಂಪತ್‌ಕುಮಾರ್‌ ಮತ್ತು ವಿದುಶಿ ಜಯಲಕ್ಷ್ಮೀ ಕೆ.ಎಸ್‌. – ಸಾಹಿತ್ಯ, ಶಿಕ್ಷಣ ಮತ್ತು ಪತ್ರಿಕೋದ್ಯಮ – ಕರ್ನಾಟಕ

ವಿಜಯ ಸಂಕೇಶ್ವರ – ವ್ಯಾಪಾರ ಮತ್ತು ಉದ್ಯಮ – ಕರ್ನಾಟಕ

ಜಗದೀಶ್ ಲಾಲ್ ಅಹುಜಾ – ಸಮಾಜಸೇವೆ (ಸೇವೆ) – ಪಂಜಾಬ್

ಮೊಹಮ್ಮದ್ ಶರೀಫ್ –ಸಮಾಜಸೇವೆ (ಸೇವೆ) – ಉತ್ತರ ಪ್ರದೇಶ

ಜಾವೇದ್ ಅಹ್ಮದ್ ತಕ್ – ಸಮಾಜಸೇವೆ (ಅಂಗವಿಕಲರ ಕಲ್ಯಾಣ) – ಜಮ್ಮು–ಕಾಶ್ಮೀರ

ಸತ್ಯನಾರಾಯಣ್ ಮುಂದಯೂರ್ – ಸಮಾಜಸೇವೆ (ಶಿಕ್ಷಣ) – ಅರುಣಾಚಲ ಪ್ರದೇಶ

ಅಬ್ದುಲ್ ಜಬ್ಬಾರ್ –ಸಮಾಜಸೇವೆ (ಸೇವೆ) – ಮಧ್ಯ ಪ್ರದೇಶ

ಉಶಾ ಚುಮಾರ್ –ಸಮಾಜಸೇವೆ (ನೈರ್ಮಲ್ಯ) – ರಾಜಸ್ತಾನ

ಪೋಪಟ್‌ರಾವ್ ಪವಾರ್ – ಸಮಾಜಸೇವೆ (ನೀರಾವರಿ) – ಮಹಾರಾಷ್ಟ್ರ

ಅರುಣೋದಯ್ ಮೊಂಡಲ್ – ಆರೋಗ್ಯ – ಪಶ್ಚಿಮ ಬಂಗಾಳ

ರಾಧಾಮೋಹನ್ ಮತ್ತು ಸಬರ್‌ಮತಿ – ಸಾವಯವ ಕೃಷಿ – ಒಡಿಶಾ

ಕುಶಾಲ್ ಕೊನ್‌ವಾರ್ ಶರ್ಮಾ – ಪಶುವೈದ್ಯಕೀಯ – ಅಸ್ಸಾಂ

ಟ್ರಿನಿಟಿ ಸೈಯೂ –ಸಾವಯವ ಕೃಷಿ – ಮೇಘಾಲಯ

ರವಿ ಕಣ್ಣನ್ – ವೈದ್ಯಕೀಯ (ಗ್ರಂಥಿಶಾಸ್ತ್ರ) – ಅಸ್ಸಾಂ

ಎಸ್. ರಾಮಕೃಷ್ಣನ್ –ಸಮಾಜಸೇವೆ (ಅಂಗವಿಕಲರ ಕಲ್ಯಾಣ) – ತಮಿಳುನಾಡು

ಸುಂದರಂ ವರ್ಮಾ –ಸಮಾಜಸೇವೆ (ಪರಿಸರ ಮತ್ತು ಅರಣ್ಯೀಕರಣ) – ರಾಜಸ್ತಾನ

ಮುನ್ನಾ ಮಾಸ್ಟರ್ – ಕಲೆ (ಭಜನ್) – ರಾಜಸ್ತಾನ

ಯೋಗಿ ಏರಾನ್ – ವೈದ್ಯಕೀಯ – ಉತ್ತರಾಖಂಡ

ರಹೀಬಾಯಿ ಸೋಮಾ ಪೋಪರೆ –ಸಾವಯವ ಕೃಷಿ – ಮಹಾರಾಷ್ಟ್ರ

ಹಿಮ್ಮತ್ ರಾಮ್ ಭಾಂಭೂ –ಸಮಾಜಸೇವೆ (ಪರಿಸರ) – ರಾಜಸ್ತಾನ

ಮೂಜಿಕ್ಕಲ್ ಪಂಕಜಾಕ್ಞಿ – ಕಲೆ – ಕೇರಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.