ADVERTISEMENT

ವಯನಾಡು ಭೂಕುಸಿತ | ಸಮರೋಪಾದಿ ರಕ್ಷಣಾ ಕಾರ್ಯ; ಸೇನೆಯೂ ಭಾಗಿ

300ಕ್ಕೂ ಹೆಚ್ಚು ಯೋಧರ ನಿಯೋಜನೆ, ರಕ್ಷಣಾ ಸಲಕರಣೆಗಳ ಏರ್‌ಲಿಫ್ಟ್‌

ಪಿಟಿಐ
Published 30 ಜುಲೈ 2024, 16:28 IST
Last Updated 30 ಜುಲೈ 2024, 16:28 IST
<div class="paragraphs"><p>ವಯನಾಡು ಭೂಕುಸಿತ</p></div>

ವಯನಾಡು ಭೂಕುಸಿತ

   

ಪಿಟಿಐ

ವಯನಾಡು: ಭೂಕುಸಿತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.

ADVERTISEMENT

ಎನ್‌ಡಿಆರ್‌ಎಫ್‌ ಮತ್ತು ಎಲ್ಲ ತುರ್ತು ಸೇವೆಗಳ ಸಿಬ್ಬಂದಿಯ ಜೊತೆ ಭಾರತೀಯ ಸೇನಾ ಸಿಬ್ಬಂದಿ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದು, ಮಣ್ಣಿನ ಅಡಿಯಲ್ಲಿ ಸಿಲುಕಿರುವವರು, ನಾಪತ್ತೆಯಾಗಿರುವವರ ಪತ್ತೆಗೆ ಮತ್ತು ಗಾಯಾಳುಗಳ ರಕ್ಷಣೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಭಾರಿ ಇಂಜಿನಿಯರಿಂಗ್ ಸಲಕರಣಿಗಳನ್ನು ಹಾಗೂ ಶ್ವಾನ ದಳವನ್ನು ಏರ್‌ಲಿಫ್ಟ್ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯವು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.  ವಿಪತ್ತು ನಿರ್ವಹಣಾ ತಂಡಗಳನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ಕರೆದೊಯ್ದಿದ್ದು, ಸಂತ್ರಸ್ತರಿಗೆ ಸಹಾಯ ಸಾಮಗ್ರಿ ಪೂರೈಕೆ ಮಾಡಲಾಗುತ್ತಿದೆ.

‘ವಯನಾಡ್‌ನಲ್ಲಿ ಮಧ್ಯರಾತ್ರಿ ದುರಂತ ಸಂಭವಿಸಿದ್ದು, ಭಾರತೀಯ ಸೇನಾ ಪಡೆಗಳು ತಕ್ಷಣವೇ ನೆರವಿಗೆ ಧಾವಿಸಿವೆ. 300 ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ನಂತರ ಹೆಚ್ಚುವರಿ ಸೇನೆ ಮತ್ತು ವಾಯು ಪಡೆ ಸಿಬ್ಬಂದಿ ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ಕೈಜೋಡಿಸಿದರು’ ಎಂದು ಕೇರಳ ಮುಖ್ಮಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.