ADVERTISEMENT

Wayanad Landslides: ಸನ್‌ರೈಸ್‌ ಕಣಿವೆಯ ಅಪಾಯಕಾರಿ ಪ್ರದೇಶದಲ್ಲಿ ಕಾರ್ಯಾಚರಣೆ

ಪಿಟಿಐ
Published 6 ಆಗಸ್ಟ್ 2024, 15:19 IST
Last Updated 6 ಆಗಸ್ಟ್ 2024, 15:19 IST
<div class="paragraphs"><p>ಭೂಕುಸಿತದಿಂದಾಗಿ ಕಾಣೆಯಾದವರ ಪತ್ತೆಗಾಗಿ ರಕ್ಷಣಾ ತಂಡ ಮಂಗಳವಾರವೂ ಕಾರ್ಯಾಚರಣೆ ಮುಂದುವರಿಸಿತು&nbsp; </p></div>

ಭೂಕುಸಿತದಿಂದಾಗಿ ಕಾಣೆಯಾದವರ ಪತ್ತೆಗಾಗಿ ರಕ್ಷಣಾ ತಂಡ ಮಂಗಳವಾರವೂ ಕಾರ್ಯಾಚರಣೆ ಮುಂದುವರಿಸಿತು 

   

– ಪಿಟಿಐ ಚಿತ್ರ 

ವಯನಾಡ್‌ (ಕೇರಳ): ವಯನಾಡ್‌ನಲ್ಲಿ ನಡೆದ ಭೀಕರ ಭೂಕುಸಿತದಿಂದಾಗಿ ಕಾಣೆಯಾದವರನ್ನು ಹುಡುಕುವ ಸಲುವಾಗಿ ಸನ್‌ರೈಸ್‌ ಕಣಿವೆಯಲ್ಲಿನ ಅರಣ್ಯ ಪ್ರದೇಶದಲ್ಲಿ ಮಂಗಳವಾರ ರಕ್ಷಣಾ ತಂಡವನ್ನು ಇಳಿಸಲಾಗಿದೆ.

ADVERTISEMENT

‘ಆರು ಯೋಧರು, ಕೇರಳದ ವಿಶೇಷ ಪೊಲೀಸ್ ಪಡೆಯ ನಾಲ್ವರು ಸಿಬ್ಬಂದಿ ಮತ್ತು ಇಬ್ಬರು ಅರಣ್ಯ ವೀಕ್ಷಕರನ್ನು ಒಳಗೊಂಡ ರಕ್ಷಣಾ ತಂಡವನ್ನು ಛಾಲಿಯರ್‌ ನದಿದಂಡೆಯಲ್ಲಿರುವ ಅಪಾಯಕಾರಿ ಭೂಪ್ರದೇಶದಲ್ಲಿ ಹೆಲಿಕಾಪ್ಟರ್‌ ಮೂಲಕ ಇಳಿಸಲಾಗಿದೆ’ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ. 

‘ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಗಿದ ಬಳಿ, ರಕ್ಷಣಾ ತಂಡವನ್ನು ಮತ್ತೊಂದು ಸ್ಥಳದಲ್ಲಿ ಇಳಿಸಲಾಗುತ್ತದೆ. ಅಪಾಯಕಾರಿ ಪ್ರದೇಶದಲ್ಲಿ ಜನರನ್ನು ಇಳಿಸುವ ಮತ್ತು ಮೇಲೆತ್ತುವ ಸಾಮರ್ಥ್ಯವನ್ನು ಹೊಂದಿದ ಸುಧಾರಿತ ಲಘು ವಿಮಾನವನ್ನು ಕಾರ್ಯಾಚರಣೆಗೆ ಬಳಸಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.