ADVERTISEMENT

ಕೋಲ್ಕತ್ತ | ಸಿಬಿಐ ತನಿಖೆಗೆ ಸಿಗದ ವೇಗ: ಮತ್ತೆ ಪ್ರತಿಭಟನೆ–ವೈದ್ಯರ ಘೋಷಣೆ

ಪಿಟಿಐ
Published 1 ನವೆಂಬರ್ 2024, 23:00 IST
Last Updated 1 ನವೆಂಬರ್ 2024, 23:00 IST
   

ಕೋಲ್ಕತ್ತ: ನಗರದ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಆಕೆಯ ಕೊಲೆ ಪ್ರಕರಣ ಕುರಿತು ಸಿಬಿಐ ನಡೆಸುತ್ತಿರುವ ತನಿಖೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಕಿರಿಯ ವೈದ್ಯರು, ಹೊಸದಾಗಿ ಪ್ರತಿಭಟನೆ ನಡೆಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ.

‘ಈ ಪ್ರಕರಣ ಕುರಿತು ಸಿಬಿಐನಿಂದ ನಡೆಯುತ್ತಿರುವ ತನಿಖೆಗೆ ವೇಗ ಸಿಗುತ್ತಿಲ್ಲ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಒಬ್ಬ ಆರೋಪಿ ಕುರಿತು ಮಾತ್ರ ಉಲ್ಲೇಖಿಸಲಾಗಿದೆ. ತನಿಖೆಯನ್ನು ಸಿಬಿಐ ಕೈಗೆತ್ತಿಕೊಳ್ಳುವ ಮೊದಲೇ ಪಶ್ಚಿಮ ಬಂಗಾಳ ಪೊಲೀಸರು ಈ ಆರೋಪಿಯನ್ನು ಬಂಧಿಸಿದ್ದರು’ ಎಂದು ಪಶ್ಚಿಮ ಬಂಗಾಳ ಕಿರಿಯ ವೈದ್ಯರ ವೇದಿಕೆ ಹೇಳಿದೆ.

‘ನ.9ರಂದು ಕೋಲ್ಕತ್ತದ ಕಾಲೇಜ್‌ ಸ್ಕ್ವೇರ್‌ನಿಂದ ಎಸ್ಪಲನೇಡ್‌ವರೆಗೆ ರ‍್ಯಾಲಿ ನಡೆಸಲಾಗುವುದು. ನಾಗರಿಕ ಸಂಘಟನೆಗಳ ಸದಸ್ಯರು ಇದರಲ್ಲಿ ಪಾಲ್ಗೊಳ್ಳುವರು. ರಾಜ್ಯದ ಇತರ ಭಾಗಗಳಲ್ಲಿಯೂ ಇದೇ ರೀತಿಯ ಪ್ರತಿಭಟನೆಗಳನ್ನು ನಡೆಸಲಾಗುವುದು’ ಎಂದು ವೇದಿಕೆಯ ವಕ್ತಾರ ದೇಬಶಿಸ್ ಹಲ್ದರ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ADVERTISEMENT

‘ನ.9ರಂದು ರಾಣಿ ರಶ್ಮೋನಿ ಅವೆನ್ಯೂವಿನಲ್ಲಿ ಬೃಹತ್‌ ಸಮಾವೇಶ ಆಯೋಜಿಸಲಾಗುವುದು. ನವೆಂಬರ್‌ 4ರಂದು ರಾಜ್ಯದ ಪ್ರತಿಯೊಂದು ಸ್ಥಳದಲ್ಲಿ ದೀಪಗಳನ್ನು ಬೆಳಗಿ, ನ್ಯಾಯಕ್ಕಾಗಿ ಆಗ್ರಹಿಸುವಂತೆ ಕೋರಲಾಗುವುದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.