ADVERTISEMENT

RG Kar Charge Sheet: ಆರೋಪಿ ವಿರುದ್ಧ ಸಿಬಿಐ 11 ಸಾಕ್ಷ್ಯಗಳ ಪಟ್ಟಿ ಸಲ್ಲಿಕೆ

ಪಿಟಿಐ
Published 9 ಅಕ್ಟೋಬರ್ 2024, 6:36 IST
Last Updated 9 ಅಕ್ಟೋಬರ್ 2024, 6:36 IST
<div class="paragraphs"><p>ಕಿರಿಯ ವೈದ್ಯರಿಂದ ಪ್ರತಿಭಟನೆ</p></div>

ಕಿರಿಯ ವೈದ್ಯರಿಂದ ಪ್ರತಿಭಟನೆ

   

(ಪಿಟಿಐ ಚಿತ್ರ)

ಕೋಲ್ಕತ್ತ: ಇಲ್ಲಿನ ಆರ್.‌ಜಿ.ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಂಜಯ್ ರಾಯ್ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಡಿಎನ್‌ಎ ವರದಿ, ರಕ್ತದ ಕಲೆ ಸೇರಿದಂತೆ 11 ಸಾಕ್ಷ್ಯಗಳನ್ನು ಪಟ್ಟಿ ಮಾಡಿದೆ.

ADVERTISEMENT

ಸಂತ್ರಸ್ತೆಯ ದೇಹದಲ್ಲಿ ಆರೋಪಿಯ ಡಿಎನ್‌ಎ ಪತ್ತೆ, ಕೃತ್ಯ ನಡೆದ ಸ್ಥಳದಲ್ಲಿ ಆರೋಪಿಯ ಕೂದಲು ಪತ್ತೆ, ಸಂತ್ರಸ್ತೆಯ ರಕ್ತದ ಕಲೆಗಳು ಆರೋಪಿಯ ಬಟ್ಟೆಯಲ್ಲಿ ಪತ್ತೆ, ಆರೋಪಿಯ ದೇಹದ ಮೇಲೆ ಗಾಯ, ಸಿಸಿಟಿವಿ ದ್ಯಶ್ಯಾವಳಿಗಳು ಮತ್ತು ಮೊಬೈಲ್ ಫೋನ್ ಲೊಕೇಷನ್, ಕರೆಗಳ ವಿವರಗಳನ್ನು ಸಾಕ್ಷ್ಯವಾಗಿ ಸಲ್ಲಿಸಲಾಗಿದೆ.

ಆಗಸ್ಟ್ 10ರಂದು ಪ್ರಮುಖ ಆರೋಪಿ ಸಂಜಯ್ ರಾಯ್ ಅವರನ್ನು ಕೋಲ್ಕತ್ತ ಪೊಲೀಸರು ಬಂಧಿಸಿದ್ದರು.

ಆರ್.ಜಿ.ಕರ್ ಆಸ್ಪತ್ರೆಯಲ್ಲಿ ಅಪರಾಧ ನಡೆದ ಸ್ಥಳದಲ್ಲಿ ಸಂಜಯ್ ರಾಯ್ ಇರುವಿಕೆಗೆ ಸಂಬಂಧಿಸಿದಂತೆ ಬಲವಾದ ಸಾಕ್ಷ್ಯಗಳು ದೊರಕಿವೆ ಎಂದು ಸಿಬಿಐ ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖ ಮಾಡಿದೆ.

ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಸಂತ್ರಸ್ತೆಯನ್ನು 'ವಿ' ಎಂದು ಗುರುತಿಸಲಾಗಿದೆ.

ಆಗಸ್ಟ್ 9ರಂದು 31 ವರ್ಷದ ಮಹಿಳಾ ವೈದ್ಯೆಯ ಮೃತದೇಹ, ಆರ್.ಜಿ.ಕರ್ ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಪತ್ತೆಯಾಗಿತ್ತು. ಆಗಸ್ಟ್ 13ರಂದು ಕಲ್ಕತ್ತ ಹೈಕೋರ್ಟ್, ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಈ ಪ್ರಕರಣ ಪಶ್ಚಿಮ ಬಂಗಾಳ ಸೇರಿದಂತೆ ದೇಶದಾದ್ಯಂತ ಭಾರಿ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.