ಜೈಪುರ:ಕಲಾಕೃತಿ, ಪುಸ್ತಕ, ವಿಂಟೇಜ್ ಕಾರು, ಬಂದೂಕು... ಇವು ರಾಜಸ್ಥಾನದ ವಿವಿಧ ಲೋಕಸಭಾ ಕ್ಷೇತ್ರಗಳಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳ ಆಸ್ತಿ! ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ಸಲ್ಲಿಸುವ ಅಫಿಡವಿಟ್ನಲ್ಲಿ ಅಭ್ಯರ್ಥಿಗಳು ಈ ಮಾಹಿತಿ ನೀಡಿದ್ದಾರೆ.
ಕೇಂದ್ರ ಸಚಿವ, ಜೈಪುರ (ಗ್ರಾಮಾಂತರ) ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ₹9 ಲಕ್ಷ ಮೌಲ್ಯದ 15 ಬಂದೂಕುಗಳು ಇರುವುದಾಗಿ ಘೋಷಿಸಿದ್ದಾರೆ. ಈ ಪೈಕಿ 10 ಬಂದೂಕುಗಳು ಉಡುಗೊರೆಯಾಗಿ ದೊರೆತವುಗಳಾಗಿವೆ.
₹64.89 ಲಕ್ಷ ಮೌಲ್ಯದ ಆಭರಣ ಹೊಂದಿರುವುದಾಗಿಜೈಪುರದ ರಾಜಕುಮಾರಿ, ರಾಜಸಮಂದ್ನಬಿಜೆಪಿ ಅಭ್ಯರ್ಥಿ ದಿಯಾ ಕುಮಾರಿ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ.
ಐದು ‘ರೋಲ್ಸ್ ರಾಯ್ಸ್’ ವಿಂಟೇಜ್ ಕಾರುಗಳನ್ನು ಹೊಂದಿರುವುದಾಗಿ ಝಾಲವಾಡ್–ಬರಾ ಸಂಸದ ದುಷ್ಯಂತ್ ಸಿಂಗ್ ಉಲ್ಲೇಖಿಸಿದ್ದಾರೆ. ₹16 ಲಕ್ಷ ಮೌಲ್ಯದ ವರ್ಣ ಚಿತ್ರಗಳು ಮತ್ತು ಕಲಾಕೃತಿಗಳು ತಮ್ಮ ಬಳಿ ಇವೆ ಎಂದು ಅಜ್ಮೇರ್ನ ಕಾಂಗ್ರೆಸ್ ಅಭ್ಯರ್ಥಿ ರಿಜು ಜುಂಜುನ್ವಾಲಾ ಮಾಹಿತಿ ನೀಡಿದ್ದಾರೆ.
₹25,500 ಮೌಲ್ಯದ ಪುಸ್ತಗಳು ಇವೆ ಎಂದು ಕೋಟಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮ್ ನರೈನ್ ಮೀನಾ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.