ನವದೆಹಲಿ: ದೆಹಲಿಯ ರಾಜಪಥದಲ್ಲಿ ನಡೆಯಲಿರುವ ಗಣರಾಜೋತ್ಸವದ ಪರೇಡ್‌ನಲ್ಲಿ 61ನೇ ಅಶ್ವದಳದ ‘ರಿಯೊ’ ಕುದುರೆ18ನೇ ಬಾರಿಗೆ ಭಾಗವಹಿಸಲಿದೆ.
‘ರಿಯೋ ಕುದುರೆಗೆ ಈಗ 22 ವಯಸ್ಸು. ಹನೋವೇರಿಯನ್ ತಳಿಯ ಈ ಕುದುರೆ ನಾಲ್ಕನೇ ವಯಸ್ಸಿನಿಂದಲೂ ಗಣರಾಜೋತ್ಸವದ ಪರೇಡ್‌ನಲ್ಲಿ ಭಾಗವಹಿಸುತ್ತಿದೆ’ ಎಂದು ಕ್ಯಾಪ್ಟನ್ ದೀಪಾಂಶು ಶೂರನ್ ಅವರು ತಿಳಿಸಿದ್ದಾರೆ.
ಮೌಂಟೆಡ್ ಕ್ಯಾವಲ್ರಿ ರಿಜಿಮೆಂಟ್ ಸದ್ಯ ವಿಶ್ವದಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ರೆಜಿಮಂಟ್ ಆಗಿದೆ. ‘ರಿಯೋ’ ನೇತೃತ್ವದ ತುಕಡಿಯನ್ನುದೀಪಾಂಶು ಅವರು ಮೂರನೇ ಬಾರಿ ಮುನ್ನಡೆಸಲಿದ್ದಾರೆ.
‘ರಿಯೋ’ ವಿಶೇಷ ಕುದುರೆಯಾಗಿದೆ. ಅದಕ್ಕೆ ಕಮಾಂಡರ್‌ನ ಮಾತುಗಳು ಅರ್ಥವಾಗುತ್ತದೆ. ರಿಯೋ 61ನೇ ಅಶ್ವದಳದ ಸದಸ್ಯನಾಗಿ 18ನೇ ಬಾರಿ ಗಣರಾಜ್ಯ ಪರೇಡ್‌ನಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯ. 15ನೇ ಬಾರಿ ಕಮಾಂಡರ್ ಅನ್ನು ಬೆನ್ನಮೇಲೆ ಕೂರಿಸಿ ಭಾಗಿಯಾಗಲಿದ್ದಾನೆ ಎಂದು ದೀಪಾಂಶು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.