ADVERTISEMENT

ಕೋಳಿ ಕಾಳಗ: ಹುಂಜದ ಕಾಲಿಗೆ ಕಟ್ಟಿದ್ದ ಚಾಕು ತಗುಲಿ ಮಾಲೀಕ ಸಾವು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 15:57 IST
Last Updated 27 ಫೆಬ್ರುವರಿ 2021, 15:57 IST
ಹುಂಜದ ಸಾಂಕೇತಿಕ ಚಿತ್ರ
ಹುಂಜದ ಸಾಂಕೇತಿಕ ಚಿತ್ರ   

ಕರೀಂನಗರ: ಕೋಳಿ ಕಾಳಗದ ಸಂದರ್ಭದಲ್ಲಿ ಹುಂಜವೊಂದರ ಕಾಲಿಗೆ ಕಟ್ಟಿದ ಹರಿತವಾದ ಚಾಕು ತಗುಲಿ ಅದರ ಮಾಲೀಕ ಮೃತಪಟ್ಟಿರುವ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ.

ಕರೀಂನಗರ ಜಿಲ್ಲೆಯ ಲೂಥೂರಿನಲ್ಲಿ ಆಕ್ರಮವಾಗಿ ಕೋಳಿ ಕಾಳಗ ಆಯೋಜಿಸಲಾಗಿತ್ತು. ಕಾಳಗದ ಸಂದರ್ಭದಲ್ಲಿ ಹುಂಜವೊಂದರ ಕಾಲಿಗೆ ಕಟ್ಟಿದ್ದ ಚಾಕು ತಗುಲಿ ಅದರ ಮಾಲೀಕಗಂಭೀರವಾಗಿ ಗಾಯಗೊಂಡಿದ್ದರು. ತೀವ್ರ ರಕ್ತಸ್ರಾವವಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟರುಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯು ಸೇರಿದಂತೆ 16 ಜನರು ಆಕ್ರಮವಾಗಿ ಕೋಳಿ ಕಾಳಗ ಆಯೋಜಿಸಿದ್ದರು. ಉಳಿದ 15 ಜನರು ನಾಪತ್ತೆಯಾಗಿದ್ದು ಅವರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.ಘಟನೆಯ ನಂತರ ಹುಂಜವನ್ನು ವಶಕ್ಕೆ ಪಡೆದಿದ್ದ ಪೊಲೀಸರು ಬಳಿಕ ಅದನ್ನು ಸ್ಥಳೀಯ ಕೋಳಿ ಪಾರಂಗೆ ನೀಡಿದ್ದಾರೆ.

ADVERTISEMENT

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಒಡಿಶಾದ ಗ್ರಾಮೀಣ ಪ್ರದೇಶಗಳಲ್ಲಿ ಆಕ್ರಮವಾಗಿ ಕೋಳಿ ಕಾಳಗವನ್ನು ಆಯೋಜಿಸಲಾಗುತ್ತದೆ. ಸರ್ಕಾರ ಕೋಳಿ ಕಾಳಗವನ್ನುನಿಷೇಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.