ಬೆಂಗಳೂರು: ಕೇರಳದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿರುದ್ಧ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್)ನ ಯುವ ಘಟಕ, ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಹಿಂದು ವಿರೋಧಿ ಘೋಷಣೆ ಕೂಗಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಸಂಬಂಧ ಬಿಜೆಪಿಯ ಐಟಿ ಸೆಲ್ ಮುಖಸ್ಥ ಅಮಿತ್ ಮಾಳವೀಯ ವಿಡಿಯೊ ಹಂಚಿದ್ದು, ಕೇರಳದಲ್ಲಿ ಹಿಂದು ಹಾಗೂ ಕ್ರಿಶ್ಚಿಯನ್ನರು ಸುರಕ್ಷಿತರಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮುಸ್ಲಿಂ ಯೂತ್ ಲೀಗ್ ಮೆರವಣಿಯಲ್ಲಿ ಹಿಂದು ವಿರೋಧಿ ಘೋಷಣೆ ಕೂಗಲಾಗಿದ್ದು, ದೇವಾಲಯಗಳ ಮುಂದೆ ನೇಣು ಹಾಕಿ, ಜೀವಂತವಾಗಿ ಸುಟ್ಟು ಹಾಕುವುದಾಗಿ ಬೆದರಿಕೆ ಒಡ್ಡಿರುವುದಾಗಿ ಮಾಳವೀಯ ಆರೋಪಿಸಿದ್ದಾರೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬೆಂಬಲವಿಲ್ಲದೆ ಇಂಥವರಿಗೆ ಘೋಷಣೆ ಕೂಗಲು ಧೈರ್ಯ ಬರುತ್ತಿರಲಿಲ್ಲ ಎಂದು ಸಹ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.