ADVERTISEMENT

ರಾಘವ್ ಚಡ್ಡಾ ಅಮಾನತು: ರಾಜ್ಯಸಭೆ ಕಾರ್ಯಾಲಯಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌

ಪಿಟಿಐ
Published 16 ಅಕ್ಟೋಬರ್ 2023, 14:03 IST
Last Updated 16 ಅಕ್ಟೋಬರ್ 2023, 14:03 IST
<div class="paragraphs"><p>ರಾಘವ್‌ ಚಡ್ಡಾ</p></div>

ರಾಘವ್‌ ಚಡ್ಡಾ

   

ಪಿಟಿಐ

ನವದೆಹಲಿ: ರಾಜ್ಯಸಭೆಯಿಂದ ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಎಎಪಿಯ ರಾಘವ್ ಚಡ್ಡಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇದೇ 30ರಂದು ನಡೆಸಲು ಸುಪ್ರೀಂಕೋರ್ಟ್‌ ಸಮ್ಮತಿಸಿದ್ದು, ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸಲು ರಾಜ್ಯಸಭೆ ಕಾರ್ಯಾಲಯಕ್ಕೆ ನೋಟಿಸ್‌ ಜಾರಿ ಮಾಡಿದೆ.

ADVERTISEMENT

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ಪೀಠವು, ಈ ಪ್ರಕರಣ ಇತ್ಯರ್ಥಪಡಿಸಲು ನೆರವಾಗುವಂತೆ ಅಟಾರ್ನಿ ಜನರಲ್ ಅವರಿಗೂ ಸೂಚಿಸಿದೆ. 

ನಿಗದಿತ ಅಧಿವೇಶನ ಮುಗಿದ ನಂತರವೂ ಸದಸ್ಯರ ಅಮಾನತು ನಿರ್ಧಾರವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಲು ಅವಕಾಶವಿಲ್ಲ ಎಂದೂ ವಕೀಲರು ಪೀಠದ ಗಮನಕ್ಕೆ ತಂದರು.

ನಿಯಮ ಉಲ್ಲಂಘನೆ, ದುರ್ನಡತೆಗಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ಅವರನ್ನು ಆಗಸ್ಟ್‌ನಲ್ಲಿ ಮುಂಗಾರು ಅಧಿವೇಶನದ ಕೊನೆಯ ದಿನ ರಾಜ್ಯಸಭಾ ಕಲಾಪದಿಂದ ಅಮಾನತು ಮಾಡಲಾಗಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.