ADVERTISEMENT

ಬಿಎಂಸಿಯಲ್ಲಿ ₹ 12,000 ಕೋಟಿ ಅವ್ಯವಹಾರ: ಜು. 1ರಂದು ಶಿವಸೇನೆ ಪ್ರತಿಭಟನೆ

ಐಎಎನ್ಎಸ್
Published 20 ಜೂನ್ 2023, 11:14 IST
Last Updated 20 ಜೂನ್ 2023, 11:14 IST
ಶಿವಸೇನೆ
ಶಿವಸೇನೆ   

ಮುಂಬೈ: ಬೃಹತ್‌ ಮಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯಲ್ಲಿ ನಡೆದಿರುವ ಹಣಕಾಸು ಅವ್ಯವಹಾರದ ವಿರುದ್ಧ ಜುಲೈ 1ರಂದು ಬಿಎಂಸಿ ಕಚೇರಿ ಎದು ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಶಿವಸೇನೆ (ಉದ್ದವ್‌ ಬಣ) ತಿಳಿಸಿದೆ. 

ಶಿವಸೇನೆಯ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ವೇಳೆ ಪಕ್ಷದ ಹಿರಿಯ ಮುಖಂಡರು ಹಾಗೂ ಶಾಸಕ ಆದಿತ್ಯಾ ಠಾಕ್ರೆ ಭಾಗವಹಿಸಲಿದ್ದಾರೆ.

 ಬಿಎಂಸಿಯಲ್ಲಿ ₹ 12,000 ಕೋಟಿ ಅವ್ಯವಹಾರ ನಡೆದಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿ, ಈ ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಈ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.