ತಿರುವನಂತಪುರ: ಕಾನೂನುಬಾಹಿರ ಬಂಧನ ಹಾಗೂ ಚಿತ್ರಹಿಂಸೆ ಅನುಭವಿಸಿದ ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ ₹1.3 ಕೋಟಿ ಪರಿಹಾರ ನೀಡಲು ಕೇರಳ ಸಚಿವ ಸಂಪುಟ ಗುರುವಾರ ತಾತ್ವಿಕ ಒಪ್ಪಿಗೆ ನೀಡಿದೆ.
ನಾರಾಯಣನ್ ವಿರುದ್ಧ ಕೇರಳದ ಇಸ್ರೋದಲ್ಲಿ ಬೇಹುಗಾರಿಕೆ ನಡೆಸಿದ್ದಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅವರಿಗೆ 1990ರಲ್ಲಿ ಕ್ಲೀನ್ ಚಿಟ್ ಸಿಕ್ಕಿತ್ತು. ನಂತರ ಅವರು ಪರಿಹಾರ ಕೋರಿ ತಿರುವನಂತಪುರದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಕೇರಳದ ಮಾಜಿ ಮುಖ್ಯ ಕಾರ್ಯದರ್ಶಿ ಕೆ.ಜಯಕುಮಾರ್ ಅವರನ್ನು ಪ್ರಕರಣ ಇತ್ಯರ್ಥ ಪಡಿಸಲು ಕೇರಳ ಸರ್ಕಾರ ನಿಯೋಜಿಸಿತ್ತು. ಜಯಕುಮಾರ್ ಅವರು ₹1.3 ಕೋಟಿ ಪರಿಹಾರ ನೀಡುವಂತೆ ಶಿಫಾರಸು ಮಾಡಿದ್ದರು. ಪರಿಹಾರ ನೀಡುವ ಸಂಪುದ ಒಪ್ಪಿಗೆಯ ಪ್ರಸ್ತಾವವನ್ನು ಶೀಘ್ರದಲ್ಲಿಯೇ ನ್ಯಾಯಾಲಯಕ್ಕೆ ಸಲ್ಲಿಸಿ, ಅನುಮೋದನೆ ಪಡೆಯಲಾಗುವುದು ಎಂದು ಹೇಳಲಾಗಿದೆ.
ಈ ಹಿಂದೆಯೂ ನಾರಾಯಣನ್ ಅವರಿಗೆ ಸುಪ್ರೀಂ ಕೋರ್ಟ್ ₹50 ಲಕ್ಷ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ₹10 ಲಕ್ಷ ಪರಿಹಾರ ನಿಡುವಂತೆ ಆದೇಶಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.