ಅಹಮದಾಬಾದ್: ಸುಗಂಧದ್ರವ್ಯ ತಯಾರಿಕೆ ಉದ್ದಿಮೆದಾರ ಪೀಯೂಷ್ ಜೈನ್ ಎಂಬುವವರಿಗೆ ಸೇರಿದ, ಕಾನ್ಪುರದ ನಿವಾಸದ ಮೇಲೆ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ₹ 160 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.
ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ (ಸಿಬಿಐಸಿ), ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯದ (ಡಿಜಿಜಿಐ) ಅಹಮದಾಬಾದ್ ವಲಯ ಕಚೇರಿ ಅಧಿಕಾರಿಗಳು ಶುಕ್ರವಾರ ಈ ಮಾಹಿತಿ ನೀಡಿದ್ದಾರೆ.
ಸಿಬಿಐಸಿ ಇತಿಹಾಸದಲ್ಲಿಯೇ ಜಪ್ತಿ ಮಾಡಿರುವ ಲೆಕ್ಕಪತ್ರ ಇಲ್ಲದ ಭಾರಿ ಮೊತ್ತದ ನಗದು ಇದಾಗಿದೆ ಎಂದು ಹೇಳಲಾಗಿದೆ. ಜೈನ್ ಒಡೆತನದ ‘ಒಡೋಕೆಮ್ ಇಂಡಸ್ಟ್ರೀಜ್’ ಕನೌಜ್‌ನಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.