ನವದೆಹಲಿ:‘ಹರಿಯಾಣದ ಗುರುಗ್ರಾಮದಲ್ಲಿರುವ ಎರಡು ವ್ಯಾಪಾರಿ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ದಾಳಿ ನಡೆಸಿದ ಬಳಿಕ ₹ 600 ಕೋಟಿ ಲೆಕ್ಕಕ್ಕೆ ಸಿಗದ ಕಪ್ಪುಹಣ ಪತ್ತೆಯಾಗಿದೆ’ ಎಂದುನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಸೋಮವಾರ ತಿಳಿಸಿದೆ.
‘ರಿಯಲ್ ಎಸ್ಟೇಟ್ ಮತ್ತು ಆತಿಥ್ಯ ಕ್ಷೇತ್ರದಲ್ಲಿ ತೊಡಗಿರುವ ಸಂಸ್ಥೆ ಹಾಗೂಟೂಲ್ಸ್ ಮತ್ತು ಉಪಕರಣಗಳನ್ನು ತಯಾರಿಸುವ ಸಂಸ್ಥೆಯ ಮೇಲೆ ನ. 10ರಂದು ದಾಳಿ ನಡೆಸಲಾಗಿತ್ತು.
‘₹3.54 ಕೋಟಿ ನಗದು ಮತ್ತು ₹ 5.15 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, 18 ಬ್ಯಾಂಕ್ ಲಾಕರ್‌ಗಳನ್ನು ತಡೆಹಿಡಿಯಲಾಗಿದೆ’ ಎಂದು ತೆರಿಗೆ ಇಲಾಖೆಯ ನೀತಿ ನಿರೂಪಣಾ ಮಂಡಳಿಯು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.