ನವದೆಹಲಿ: ‘ಕಾವಡ್ ಯಾತ್ರೆ ಮಾರ್ಗದಲ್ಲಿನ’ ಅಂಗಡಿಗಳ ಮುಂದೆ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸಬೇಕು ಎಂಬ ಉತ್ತರಪ್ರದೇಶ ಸರ್ಕಾರದ ಆದೇಶದ ಕುರಿತು ಚರ್ಚೆಗೆ ಕೋರಿದ ಪ್ರತಿಪಕ್ಷಗಳ ನೋಟಿಸ್‌ಗಳನ್ನು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ತಿರಸ್ಕರಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಈ ಆದೇಶದ ಕುರಿತು ಚರ್ಚೆಗಾಗಿ ಸದನದ ಇತರೆ ಕಾರ್ಯಗಳನ್ನು ಬದಿಗಿಡಬೇಕು ಎಂದು ಕೋರಿ ಪ್ರತಿಪಕ್ಷಗಳ ಸಂಸದರು ನೋಟಿಸ್‌ಗಳನ್ನು ನೀಡಿದ್ದರು.
‘ಆದರೆ, ಈ ನೋಟಿಸ್‌ಗಳು ನಿಯಮ 267ರ ಅಗತ್ಯಗಳಿಗೆ ಮತ್ತು ಅಧ್ಯಕ್ಷರು ನೀಡಿದ ನಿರ್ದೇಶನಗಳಿಗೆ ಅನುಗುಣವಾಗಿಲ್ಲ. ಹೀಗಾಗಿ ಈ ಅರ್ಜಿಗಳನ್ನು ಒಪ್ಪಿಕೊಳ್ಳಲಾಗದು’ ರಾಜ್ಯಸಭೆ ಸಭಾಪತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.