ನವದೆಹಲಿ: ದೇಶದಲ್ಲಿ ಸಾಮರಸ್ಯವನ್ನು ಪೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರ್‌ಎಸ್ಎಸ್) ಮತ್ತು ಜಮಾತ್ ಉಲೇಮ-ಇ-ಹಿಂದ್ಜತೆಯಾಗಿ ಕಾರ್ಯವೆಸಗಲಿದೆ.
ಶುಕ್ರವಾರ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ಅವರುಜಮಾತ್ ಉಲೇಮ ಸಂಘಟನೆಯ ಮುಖ್ಯಸ್ಥ ಮೌಲಾನ ಸಯ್ಯದ್ ಅರ್ಷಾದ್ ಮದನಿ ಅವರನ್ನು ಭೇಟಿಯಾಗಿದ್ದುಎರಡೂ ಸಮುದಾಯಗಳ ನಡುವೆ ಸಾಮರಸ್ಯವನ್ನು ಪ್ರೋತ್ಸಾಹಿಸುವ ಕಾರ್ಯ ಯೋಜನೆಗೆ ಒಪ್ಪಿಕೊಂಡಿದ್ದಾರೆ.
ಆರ್‌ಎಸ್‌ಎಸ್ ನಾಯಕ ರಾಮ್ ಲಾಲ್ ಅವರನ್ನು ಇತ್ತೀಚೆಗೆ ಸಂಪರ್ಕ ವಿಭಾಗದ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಈ ಹಿಂದೆ ಅವರು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಈ ಎರಡೂ ಸಂಘಟನೆಗಳು ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ರಾಮ್ ಲಾಲ್ ವಿವರಿಸಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಸುಮಾರು ಒಂದು ಗಂಟೆ ಕಾಲ ನಾಯಕರು ಮಾತುಕತೆ ನಡೆಸಿದ್ದು, ಸಂಘದ ಬಗ್ಗೆ ಮುಸ್ಲಿಮರು ಆತಂಕಗೊಳ್ಳುವ ಅಗತ್ಯವಿಲ್ಲ. ನಮ್ಮ ವಿಚಾರಧಾರೆ ಹಿಂದೂಗಳೂ ಮತ್ತು ನೀವು ಬೇರೆ ಬೇರೆ ಎಂದು ಗ್ರಹಿಸುವುದಿಲ್ಲ ಎಂದು ಭಾಗವತ್ ಅವರು ಮದನಿ ಅವರಲ್ಲಿ ಹೇಳಿದ್ದಾರೆ.
ಗುಂಪು ಹಲ್ಲೆ ಮತ್ತು ಆಸ್ಸಾಂನಲ್ಲಿ ಎನ್‌ಆರ್‌ಸಿಯಲ್ಲಿ ಹೆಸರು ತೆಗೆದುಹಾಕಿರುವುದರ ಬಗ್ಗೆ ಮುಸ್ಲಿಮರು ಆತಂಕಗೊಂಡಿದ್ದಾರೆ. ನಾನು ವೀರ್ ಸಾವರ್ಕರ್ ಮತ್ತು ಎಂಎಸ್ ಗೋವಾಳ್ಕರ್ ಅವರ ವಿಚಾರಧಾರೆಯನ್ನು ಒಪ್ಪುವುದಿಲ್ಲ. ಈಗಿನ ಪರಿಸ್ಥಿತಿ ಆತಂಕ ಹುಟ್ಟಿಸಿದೆ ಎಂದಿದ್ದಾರೆ ಮದನಿ.
ಇದಕ್ಕೆ ಪ್ರತಿಕ್ರಿಯಿಸಿದ ಭಾಗವತ್, ಹಿಂದುತ್ವ ಅಂದರೆ ಹಿಂದೂ ಮತ್ತು ಮುಸ್ಲಿಂ ಜತೆಯಾಗಿರುವುದು ಎಂಬರ್ಥ ಎಂದಿದ್ದಾರೆ.
ಆದಾಗ್ಯೂ, ಈ ಜನ್ಮಭೂಮಿ ಮತ್ತು ಜಮ್ಮು ಕಾಶ್ಮೀರದ ಬಗ್ಗೆ ಮಾತುಕತೆ ನಡೆದಿಲ್ಲ. ಒಂದೂವರೆ ವರ್ಷದ ಹಿಂದೆಯೇ ಇವರಿಬ್ಬರ ಭೇಟಿ ನಿಗದಿಯಾಗಿತ್ತು. ಚುನಾವಣೆ ಮತ್ತು ಇನ್ನಿತರ ಕಾರಣಗಳಿಂದ ಅದು ಮುಂದೂಡುತ್ತಾ ಹೋಯಿತು. ಜಮಾತ್, ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಮಾಡಿದ ಕೆಲಸದ ಬಗ್ಗೆ ಸುನಿಲ್ ದೇಶ್‌ಪಾಂಡೆ ವಿವರಿಸಿದ್ದಾರೆ.
ಮುಂದಿನ ವಾರ ರಾಜಸ್ಥಾನದ ಪುಷ್ಕರ್‌ನಲ್ಲಿ ಆರ್‌ಎಸ್ಎಸ್‌ನ ಸಮನ್ವಯ ಭೈಠಕ್ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.
ಭಾಗವತ್ ಮತ್ತು ಮದನಿ ಅವರ ನಡುವಿನ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಎಸ್ಎಸ್‌ನ ಹಿರಿಯ ಕಾರ್ಯಕರ್ತರೊಬ್ಬರು, ಮುಸ್ಲಿಂ ನಾಯಕರು ಆರ್‌ಎಸ್ಎಸ್ ನಾಯಕರನ್ನು ಭೇಟಿ ಮಾಡಿದ್ದು ಇದೇ ಮೊದಲೇನೂ ಅಲ್ಲ. ಕೆ.ಸುದರ್ಶನ್ ಅವರು ಸರ್ಸಂಗಚಾಲಕ್ ಆಗಿದ್ದಾಗ ಅವರು ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ನಾಯಕರನ್ನು ಹಲವಾರು ಬಾರಿ ಭೇಟಿಯಾಗಿದ್ದರು.2009ರಲ್ಲಿ ವಂದೇ ಮಾತರಂ ಹೇಳುವ ಬಗ್ಗೆ ವಿವಾದವೆದ್ದಾಗ ಅವರುಶಿಯಾ ನಾಯಕ ಹಮೀದುಲ್ ಹಸನ್ ಅವರನ್ನು ಭೇಟಿಯಾಗಿದ್ದರು.ಕೆಲವು ವರ್ಷಗಳ ನಂತರ ಅವರು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ ಕಲ್ಬೆ ಸಾದಿಕ್ ಅವರನ್ನು ಭೇಟಿ ಮಾಡಿದ್ದರು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.