ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರ ನಿಧನಕ್ಕೆ ಆರೆಸ್ಸೆಸ್ ಸಂತಾಪ ಸೂಚಿಸಿದೆ. ಹೀರಾಬೆನ್ ಅವರ ಬದುಕು ಭಕ್ತಿಯ ಮೌಲ್ಯಗಳಿಗೆ ದೊಡ್ಡ ಉದಾಹರಣೆ ಎಂದು ಸ್ಮರಿಸಿದೆ.
99 ವರ್ಷದ ಮೋದಿ ಅವರ ತಾಯಿ ಅಹಮದಾಬಾದ್‌ನ ಯು.ಎನ್.ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆ್ಯಂಡ್ ರೀಸರ್ಚ್ ಸೆಂಟರ್ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.
''ಈ ದುಃಖದ ಸನ್ನಿವೇಶದಲ್ಲಿ ಆರೆಸ್ಸೆಸ್‌ನ ಎಲ್ಲ ಸ್ವಯಂ ಸೇವಕರು ಹೀರಾಬೇನ್ ಅವರಿಗೆ ಗೌರವ ಅರ್ಪಿಸುತ್ತಿದ್ದೇವೆ'' ಎಂದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
''ಮಾತಾಜೀ ಅವರ ನಿರಂತರವಾಗಿ ಕರ್ತವ್ಯ ನಿಷ್ಠೆಯು ಅರ್ಥಪೂರ್ಣ ಬದುಕಿಗೆ ದೊಡ್ಡ ಉದಾಹರಣೆ. ಅವರು ಅತ್ಯಂತ ಕಷ್ಟಕರ ಸನ್ನಿವೇಶದಲ್ಲೂ ದೇವರ ಮೇಲೆ ಅಚಲ ನಂಬಿಕೆ ಇರಿಸಿಕೊಂಡಿದ್ದರು. ಭಕ್ತಿಯ ಮೌಲ್ಯಗಳನ್ನು ಹೆಚ್ಚಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕುಟುಂಬ ಸದಸ್ಯರಿಗೆ ಸಂಘವು ಸಂತಾಪವನ್ನು ಸೂಚಿಸುತ್ತದೆ. ಅಗಲಿದ ಮಾತಾಜೀ ಅವರ ಆತ್ಮಕ್ಕೆ ಸದ್ಗತಿಯನ್ನು ದೇವರಲ್ಲಿ ಆರೆಸ್ಸೆಸ್ ಪ್ರಾರ್ಥಿಸುತ್ತದೆ.'' ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.