ADVERTISEMENT

1 ಲಕ್ಷ ಶಾಖೆ: ಗುರಿ ಮುಟ್ಟುವ ಸನಿಹದಲ್ಲಿ ಆರ್‌ಎಸ್‌ಎಸ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 15:41 IST
Last Updated 21 ಫೆಬ್ರುವರಿ 2023, 15:41 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2024ರ ಕೊನೆಯಲ್ಲಿ ಶತಮಾನೋತ್ಸವ ಆಚರಿಸಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರೆಸ್ಸೆಸ್‌) ದೇಶದ ಒಂದು ಲಕ್ಷ ಸ್ಥಳಗಳಲ್ಲಿ ತನ್ನ ಅಸ್ತಿತ್ವ ಹೊಂದುವ ಮಹತ್ವಾಕಾಂಕ್ಷೆಯ ಗುರಿ ಸಾಧನೆಯ ಸನಿಹದಲ್ಲಿದೆ.

ಶತಮಾನೋತ್ಸವವನ್ನು ಕಾಶ್ಮೀರದಲ್ಲಿ ನಡೆಸಲು ಆರೆಸ್ಸೆಸ್‌ ಸಿದ್ಧತೆ ನಡೆಸಿಕೊಳ್ಳುತ್ತಿದೆ ಎನ್ನಲಾಗಿದೆ. ಆದರೆ, ಇದನ್ನು ಅಧಿಕೃತ ಮೂಲಗಳು ಖಚಿತಪಡಿಸಿಲ್ಲ.

‘2024ರಲ್ಲಿ ದಸರಾ ಸಂದರ್ಭ ಶತಮಾನೋತ್ಸವ ಆಚರಿಸಲು ಸಂಘಟನೆ ನಿರ್ಧರಿಸಿದೆ. ಆ ವೇಳೆಗೆ ಒಂದು ಲಕ್ಷ ಶಾಖೆಗಳು ಅಸ್ತಿತ್ವದಲ್ಲಿರಬೇಕು. ಈ ಗುರಿಯನ್ನು ಮೂರು ವರ್ಷಗಳಲ್ಲಿ ಸಾಧಿಸಬೇಕೆಂದು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಕೋವಿಡ್‌ ಸಾಂಕ್ರಾಮಿಕವು ಯೋಜನೆಗಳಿಗೆ ಧಕ್ಕೆ ತಂದಿತು’ ಎಂದು ಸಂಘಟನೆಯ ಪ್ರಮುಖರು ಹೇಳಿದ್ದಾರೆ.

ADVERTISEMENT

100ನೇ ವರ್ಷದ ಹೊಸ್ತಿಲಿನಲ್ಲಿರುವ ಆರೆಸ್ಸೆಸ್‌, ಎಲ್ಲರನ್ನೂ ಒಳಗೊಳ್ಳುವ ಸಂಘಟನೆಯಾಗಿ ರೂಪುಗೊಳ್ಳುವ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಮುಸ್ಲಿಂ ಸಮುದಾಯದ ನಾಯಕರನ್ನೂ ಭೇಟಿ ಮಾಡಿ ಮಾತುಕತೆ ನಡೆಸುತ್ತಿದೆ. ಮುಸ್ಲಿಂ ಸಮುದಾಯಗಳ ಪ್ರಾಬಲ್ಯವಿರುವ ಪ್ರದೇಶಗಳಿಗೂ ಸಂಘಟನೆಯ ನಾಯಕರು ಭೇಟಿ ನೀಡುತ್ತಿದ್ದಾರೆ.

ಸಂಘಟನೆಯ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ಇತ್ತೀಚೆಗೆ ಜಾತಿ ವ್ಯವಸ್ಥೆ ಕುರಿತು ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿ, ಕೊನೆಗೆ ಅವರು ಸ್ಪಷ್ಟನೆ ನೀಡಬೇಕಾಯಿತು.

‘ಸಂಘಟನೆಯ ಅನುಕ್ರಮದ ಮಾದರಿಯಂತೆ ಮೂರ‍್ನಾಲ್ಕು ಪಂಚಾಯಿತಿಗಳು ಅಥವಾ ಏಳೆಂಟು ಹಳ್ಳಿಗಳನ್ನು ಒಳಗೊಂಡ ಪ್ರತಿ ಮಂಡಲದ ಮಟ್ಟದಲ್ಲಿ ಸಂಘಟನೆಯ ಹೆಜ್ಜೆಗುರುತು ಮೂಡಿಸುವುದು, 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಇರುವ ಎಲ್ಲ ಮಂಡಲಗಳನ್ನು ತಲುಪುವ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ನಾವು ಶೇ 50ಕ್ಕೂ ಹೆಚ್ಚು ಮಂಡಲಗಳಲ್ಲಿ ಅಸ್ತಿತ್ವ ಹೊಂದಿದ್ದೇವೆ’ ಎಂದು ಅವರು ಹೇಳಿದ್ದಾರೆ.

100ನೇ ವರ್ಷದ ಹೊಸ್ತಿಲಿನಲ್ಲಿರುವ ಆರೆಸ್ಸೆಸ್‌, ಎಲ್ಲರನ್ನೂ ಒಳಗೊಳ್ಳುವ ಸಂಘಟನೆಯಾಗಿ ರೂಪುಗೊಳ್ಳುವ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಮುಸ್ಲಿಂ ಸಮುದಾಯದ ನಾಯಕರನ್ನೂ ಭೇಟಿ ಮಾಡಿ ಮಾತುಕತೆ ನಡೆಸುತ್ತಿದೆ. ಮುಸ್ಲಿಂ ಸಮುದಾಯಗಳ ಪ್ರಾಬಲ್ಯವಿರುವ ಪ್ರದೇಶಗಳಿಗೂ ಸಂಘಟನೆಯ ನಾಯಕರು ಭೇಟಿ ನೀಡುತ್ತಿದ್ದಾರೆ.

ಸಂಘಟನೆಯ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ಇತ್ತೀಚೆಗೆ ಜಾತಿ ವ್ಯವಸ್ಥೆ ಕುರಿತು ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿ, ಕೊನೆಗೆ ಅವರು ಸ್ಪಷ್ಟನೆ ನೀಡಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.