ADVERTISEMENT

ದೇಶದ ಸಾಂವಿಧಾನಿಕ ಅಡಿಪಾಯ ದುರ್ಬಲಗೊಳಿಸಲು ಆರ್‌ಎಸ್‌ಎಸ್‌ ಯತ್ನ: ಯೆಚೂರಿ

ಪಿಟಿಐ
Published 14 ಮಾರ್ಚ್ 2022, 16:31 IST
Last Updated 14 ಮಾರ್ಚ್ 2022, 16:31 IST
ಸೀತಾರಾಮ ಯೆಚೂರಿ
ಸೀತಾರಾಮ ಯೆಚೂರಿ   

ನವದೆಹಲಿ: ಭವ್ಯ ಭಾರತದ ಪರಿಕಲ್ಪನೆಯ ಮೂಲಕ ದೇಶದ ಸಾಂವಿಧಾನಿಕ ಅಡಿಪಾಯವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಆರ್‌ಎಸ್‌ಎಸ್‌ ಮಾಡುತ್ತಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಆರೋಪಿಸಿದ್ದಾರೆ.

ಸಂವಿಧಾನದ ಕಲಂ 51ಎ(ಎಫ್‌) ಪ್ರತಿಯೊಬ್ಬ ನಾಗರಿಕನಿಗೂ ತಮ್ಮ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಮೌಲ್ಯೀಕರಿಸಲು ಮತ್ತು ಸಂರಕ್ಷಿಸಲು ಅವಕಾಶ ನೀಡುತ್ತದೆ. ನಮ್ಮ ಸಂವಿಧಾನವನ್ನು ರಕ್ಷಿಸಲು ಸಂಕಲ್ಪ ಮಾಡಿ ಎಂದೂ ಅವರು ಟ್ವೀಟ್‌ ಮಾಡಿದ್ದಾರೆ.

ಜಾಗತಿಕವಾಗಿ ಭಾರತದ ಕುರಿತು ತಪ್ಪುಕಲ್ಪನೆಗಳನ್ನು ಪ್ರಚುರಪಡಿಸಲಾಗುತ್ತಿದ್ದು, ಇದನ್ನು ಹೋಗಲಾಡಿಸಲು ಸಂಶೋಧಕರು, ಲೇಖಕರ ನೆರವು ಪಡೆಯಲಾಗುವುದು ಎಂದು ಆರ್‌ಎಸ್‌ಎಸ್‌ ಭಾನುವಾರ ಹೇಳಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.