ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ತೀರ್ಪನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವಆರ್‌ಎಸ್‌ಎಸ್ ಮತ್ತು ಬಿಜೆಪಿಶಬರಿಮಲೆಯನ್ನು ರಣರಂಗವಾಗಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಪವಿತ್ರ ದೇಗುಲವನ್ನು ರಣರಂಗವಾಗಿಸಲು ಇಲ್ಲೊಂದು ದೊಡ್ಡ ಸಂಚು ನಡೆದಿದೆ ಎಂದು ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಪಿಣರಾಯಿ ಹೇಳಿದ್ದಾರೆ.
ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂದು ಕಳೆದ ತಿಂಗಳು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು, ತೀರ್ಪನ್ನು ವಿರೋಧಿಸಿ ಶಬರಿಮಲೆಯಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಸೇರಿದಂತೆ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.
ಇಲ್ಲಿಯವರಿಗೆ ರಾಜ್ಯ ಕಂಡರಿಯದ ಹಿಂಸಾಚಾರಕ್ಕೆ ಕಾರಣವಾಗಿದ್ದು ಆರ್‌ಎಸ್‌ಎಸ್, ಇಲ್ಲ ನೆಲೆಯೂರುವುದಕ್ಕಾಗಿ ಆರ್‌ಎಸ್‍ಎಸ್ ಎಲ್ಲ ರೀತಿಯ ಕೆಟ್ಟ ತಂತ್ರಗಳನ್ನು ಮಾಡುತ್ತಿದೆ. ಬೇಸರದ ವಿಷಯ ಏನೆಂದರೆ ಕಾಂಗ್ರೆಸ್ ಕೂಡಾ ಆರ್‌ಎಸ್ಎಸ್ ಪರ ವಾಲುತ್ತಿದೆ ಎಂದಿದ್ದಾರೆ ಪಿಣರಾಯಿ.
ಅಯ್ಯಪ್ಪ ಭಕ್ತರ ಭಾವನೆಗೆ ಧಕ್ಕೆ ತರಲು ಕೇರಳ ಸರ್ಕಾರ ಬದ್ಧವಾಗಿದೆ ಎಂಬಂತೆ ಕಾಣುತ್ತಿದೆ.ಇಲ್ಲಿಯವರೆಗೆ ಈ ರೀತಿ ಸಂವೇದನಾರಹಿತ ಸರ್ಕಾರವನ್ನು ನಾವು ನೋಡಿದ್ದಿಲ್ಲ ಎಂದು ಕೇರಳ ಬಿಜೆಪಿ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೆ, ಪಿಣರಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ಮತ್ತು ಪತ್ರಕರ್ತೆಯನ್ನು ಶಬರಿಮಲೆ ದೇಗುಲಕ್ಕೆ ಪ್ರವೇಶಿಸದಂತೆ ತಡೆದ ತಂತ್ರಿ ವಿರುದ್ಧವೂ ಪಿಣರಾಯಿ ಕಿಡಿ ಕಾರಿದ್ದಾರೆ. ತಂತ್ರಿ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧವಾಗಿ ನಡೆದುಕೊಂಡಿದ್ದಾರೆ.ಅವರು ಈ ರೀತಿ ಬೆದರಿಕೆಯೊಡ್ಡುವಂತಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.