ADVERTISEMENT

ಯುರೋಪ್‌ನಲ್ಲಿ ಅರಣ್ಯನಾಶ ನಿಯಂತ್ರಣ ಕಾಯ್ದೆ ಜಾರಿ: ರಬ್ಬರ್‌ ಬೆಳೆಗಾರರ ಆತಂಕ

ಪಿಟಿಐ
Published 6 ಆಗಸ್ಟ್ 2024, 15:08 IST
Last Updated 6 ಆಗಸ್ಟ್ 2024, 15:08 IST
<div class="paragraphs"><p>ರಬ್ಬರ್‌</p></div>

ರಬ್ಬರ್‌

   

ಕೊಟ್ಟಾಯಂ: ಐರೋಪ್ಯ ಒಕ್ಕೂಟವು 2024ರ ಡಿ. 31ರಿಂದ ಅರಣ್ಯನಾಶ ನಿಯಂತ್ರಣ (EUDR) ಕಾಯ್ದೆಯನ್ನು ಜಾರಿಗೆ ತರುತ್ತಿದ್ದು, ಇದರಿಂದ ಭಾರತದ ರಬ್ಬರ್ ಉತ್ಪನ್ನಗಳು ಈ ದೇಶಗಳಿಗೆ ರಫ್ತು ಮಾಡಲು ಸಾಧ್ಯವಿಲ್ಲ ಎಂಬ ಅಂಶ ರೈತರನ್ನು ಆತಂಕಕ್ಕೆ ನೂಕಿದೆ.

‘ಐರೋಪ್ಯ ಒಕ್ಕೂಟದ ರಾಷ್ಟ್ರಗಳಿಗೆ ರಬ್ಬರ್ ಮತ್ತು ರಬ್ಬರ್ ಉತ್ಪನ್ನಗಳನ್ನು ಕಳುಹಿಸಬೇಕೆಂದರೆ, ಪರಿಸರ ನಾಶ ಮಾಡಿಲ್ಲ ಎಂಬುದನ್ನು ಖಾತ್ರಿಪಡಿಸಬೇಕಿದೆ. ಇದು ದೇಶದ ರಬ್ಬರ್ ಬೆಳೆಗಾರರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಕುರಿತು ರಬ್ಬರ್ ಮಂಡಳಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂ. ವಸಂತಗಣೇಶನ್ ಹೇಳಿದ್ದಾರೆ.

ADVERTISEMENT

ಈ ನೂತನ ಕಾಯ್ದೆಯ ಮುಖ್ಯ ಉದ್ದೇಶ ಸುಸ್ಥಿರ ಹಾಗೂ ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಯನ್ನು ವಿಶ್ವವ್ಯಾಪಿ ಉತ್ತೇಜಿಸುವುದಾಗಿದೆ. ನೈಸರ್ಗಿಕ ರಬ್ಬರ್‌ ಉತ್ಪಾದನೆ ಕ್ಷೇತ್ರದಲ್ಲಿ ಸದ್ಯ ಎದುರಾಗಿರುವ ಸಮಸ್ಯೆಯನ್ನು ಎದುರಿಸಲು ಎಲ್ಲಾ ರೀತಿಯ ಯೋಜನೆ ರೂಪಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಐರೋಪ್ಯ ಒಕ್ಕೂಟದ ಈ ನೂತನ ಕಾಯ್ದೆ ಮೂಲಕ ಭಾರತದ ರಬ್ಬರ್‌ ಉತ್ಪಾದನೆ ಮೇಲಾಗುವ ಪರಿಣಾಗಳ ಕುರಿತು ಭಾರತೀಯ ತೋಟಗಾರಿಕೆ ನಿರ್ವಹಣಾ ಸಂಸ್ಥೆ ಅಧ್ಯಯನ ಆರಂಭಿಸಿದೆ’ ಎಂದು ಅವರು ವಿವರಿಸಿದ್ದಾರೆ.

‘ಇದರ ನಡುವೆಯೇ ಭಾರತದ ರಬ್ಬರ್ ತೋಟಗಾರಿಕೆ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಮಂಡಳಿಯು ಕೆಲವೊಂದು ಪ್ರಕ್ರಿಯೆಗಳನ್ನು ಆರಂಭಿಸಿದೆ. ಇವುಗಳನ್ನು ಅನುಷ್ಠಾನಗೊಳಿಸಲು ಸೂಕ್ತ ಸೇವಾದಾರರ ಆಯ್ಕೆ ನಡೆಯುತ್ತಿದೆ. ಐರೋಪ್ಯ ಒಕ್ಕೂಟದ ಅರಣ್ಯನಾಶ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರುವ ಉದ್ದೇಶವನ್ನು ರಬ್ಬರ್ ಮಂಡಳಿಯೂ ಹೊಂದಿದೆ. ಆ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಚರ್ಚಿಸಲಾಗುವುದು. ಬೆಳೆಗಾರರು ಮತ್ತು ಉತ್ಪನ್ನಗಳ ತಯಾರಕರ ಹಿತ ಕಾಯುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ’ ಎಂದು  ವಸಂತಗಣೇಶನ್ ಹೇಳಿದ್ದಾರೆ.

‘ರಬ್ಬರ್ ಹೆಚ್ಚಾಗಿ ಬೆಳೆಯುವ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ರಬ್ಬರ್ ಹಾಲು ತೆಗೆಯುವ ದಿನಗಳು ಕಡಿಮೆಯಾಗಿವೆ. ಪ್ರತಿಕೂಲ ಹವಾಮಾನದಿಂದಾಗಿ ಬಹಳಷ್ಟು ಬೆಳೆಗಾರರಿಗೆ ರಬ್ಬರ್ ಮರಗಳ ಸಮರ್ಪಕ ಪೋಷಣೆ ಸಾಧ್ಯವಾಗುತ್ತಿಲ್ಲ. ಇದು ಇಳುವರಿ ಮೇಲೂ ಪರಿಣಾಮ ಬೀರಿದ್ದು, ದೇಶೀಯ ಮಾರುಕಟ್ಟೆಯಲ್ಲಿ ರಬ್ಬರ್ ಲಭ್ಯತೆಯ ಕೊರತೆ ಎದುರಾಗಿದೆ’ ಎಂದಿದ್ದಾರೆ.

ಮತ್ತೊಂದೆಡೆ ಆಟೊಮೊಬೈಲ್ ಕ್ಷೇತ್ರವು ಬೆಳವಣಿಗೆಯ ಹಾದಿಯಲ್ಲಿದ್ದು, ಟೈರ್‌ಗೆ ಬಳಸುವ ನೈಸರ್ಗಿಕ ರಬ್ಬರ್‌ನ ಬೇಡಿಕೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.