ADVERTISEMENT

ಬುಲ್ಡೋಜರ್‌ನಿಂದ ಸ್ವತ್ತುಗಳ ಧ್ವಂಸ ಕಾನೂನುಗಳನ್ನೇ ನಾಶ ಮಾಡಿದಂತೆ: ಕೋರ್ಟ್‌ 

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 16:32 IST
Last Updated 12 ಸೆಪ್ಟೆಂಬರ್ 2024, 16:32 IST
<div class="paragraphs"><p><strong>ಸುಪ್ರೀಂ ಕೋರ್ಟ್‌</strong>&nbsp;</p></div>

ಸುಪ್ರೀಂ ಕೋರ್ಟ್‌ 

   

ನವದೆಹಲಿ: ‘ಒಬ್ಬ ವ್ಯಕ್ತಿ ಕಾನೂನು ಉಲ್ಲಂಘಿಸಿದ ಮಾತ್ರಕ್ಕೆ ಕಾನೂನುಬದ್ಧವಾಗಿ ನಿರ್ಮಿಸಿದ ಆತನ ಕುಟುಂಬದ ಮನೆ ಅಥವಾ ಸ್ವತ್ತನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡುವುದು ಸರಿಯಲ್ಲ. ಅಂಥ ಕ್ರಮ ಕಾನೂನುಗಳನ್ನೇ ಧ್ವಂಸ ಮಾಡುವುದಕ್ಕೆ ಸಮ’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಕಠಿಣವಾಗಿ ಹೇಳಿದೆ.

‘ಸರ್ಕಾರ ಕೈಗೊಳ್ಳುವ ಕ್ರಮಗಳು ಕಾನೂನು ಪ್ರಕಾರವೇ ಇರಬೇಕು. ಆರೋಪಿಯೊಬ್ಬನ ಮನೆಯನ್ನು ಬುಲ್ಡೋಜರ್‌ ಬಳಸಿ ಧ್ವಂಸ ಮಾಡಲಾಗುತ್ತದೆ ಎಂಬ ಬೆದರಿಕೆಗಳು ಇರುವುದು ಊಹಿಸಲು ಸಾಧ್ಯವಿಲ್ಲ’ ಎಂದೂ ಸುಪ್ರೀಂ ಕೋರ್ಟ್‌ ಹೇಳಿದೆ.

ADVERTISEMENT

ಜಾವೇದಲಿ ಮಹೆಬೂಬ್‌ಮಿಯಾ ಸೈಯದ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೃಷಿಕೇಶ್‌ ರಾಯ್, ಸುಧಾಂಶು ಧುಲಿಯಾ ಹಾಗೂ ಎಸ್.ವಿ.ಎನ್‌.ಭಟ್ಟಿ ಅವರಿದ್ದ ನ್ಯಾಯಪೀಠ ನಡೆಸಿತು.

‘ಆರೋಪಿತನ ವಿರುದ್ಧ ಕೇಳಿ ಬಂದಿರುವ ಅಪರಾಧ ಕೃತ್ಯವು ಕಾನೂನು ಪ್ರಕ್ರಿಯೆ ಮೂಲಕ ಸಾಬೀತಾಗಬೇಕು’ ಎಂದ ನ್ಯಾಯಪೀಠ, ಅರ್ಜಿದಾರನ ಆಸ್ತಿಗೆ ಸಂಬಂಧಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.