ಕೀವ್ (ಎಪಿ): ಉಕ್ರೇನ್‌ನಿಂದ ವಶಕ್ಕೆ ಪಡೆದಿರುವ ಮರಿಯುಪೋಲ್ ಬಂದರು ನಗರಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ ನೀಡಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.
ಶನಿವಾರ ಪುಟಿನ್ ಅವರು ಮರಿಯುಪೋಲ್‌ನಿಂದ ಅಲ್ಪ ದೂರದಲ್ಲಿರುವ ಕ್ರಿಮಿಯಾಗೆ ಭೇಟಿ ನೀಡಿದ್ದರು.
‘ಹೆಲಿಕಾಪ್ಟರ್‌ನಲ್ಲಿ ಮರಿಯುಪೋಲ್‌ಗೆ ಬಂದಿಳಿದ ಪುಟಿನ್ ನಗರದಾದ್ಯಂತ ಸುತ್ತಾಡಿದರು. ನಂತರ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಆರ್ಟ್ ಶಾಲೆಗೆ ಭೇಟಿ ಮಕ್ಕಳೊಂದಿಗೂ ಮಾತುಕತೆ ನಡೆಸಿದರು’ ಎಂದು ಅದು ತಿಳಿಸಿದೆ.
ಕಳೆದ ಮೇ ನಲ್ಲಿ ಮರಿಯುಪೋಲ್ ಅನ್ನು ರಷ್ಯಾ ವಶಕ್ಕೆ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.